Recent Posts

Saturday, May 9, 2026
ಸುದ್ದಿ

ಮಹಾರಾಷ್ಟ್ರದ ಕೊಯ್ನಾ ಡ್ಯಾಂ ಬಳಿ ಲಘು ಭೂಕಂಪನ – ಕಹಳೆ ನ್ಯೂಸ್

ಮಹಾರಾಷ್ಟ್ರ : ಸತಾರಾ ಜಿಲ್ಲೆ ಪಟನಾ ತಾಲೂಕಿನ ಕೊಯ್ನಾ ಡ್ಯಾಂನಲ್ಲಿ ಭೂಕಂಪನದ ಅನುಭವಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೊಯ್ನಾ ಡ್ಯಾಂ ಬಳಿ ನಿನ್ನ ರಾತ್ರಿ ಭೂಕಂಪನದ ಅನುಭವಾಗಿದೆ. ಕೊಯ್ನಾ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನವಾಗಿದೆ ಎಂದು ಮಹಾರಾಷ್ಟ್ರ ನೀರಾವರಿ ಇಲಾಖೆ ಮಾಹಿತಿ ನೀಡಿದೆ.

ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಯ್ನಾ ಡ್ಯಾಂ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಭೂಮಿ ಕಂಪಿಸಿದೆ ಎನ್ನಲಾಗಿದೆ. ಡ್ಯಾಂ ಗೆ ಏನಾದರೂ ಧಕ್ಕೆಯಾದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ. ಕಂಪನದ ಹಿನ್ನೆಲೆ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರು ಪ್ರವಾಹ ಎದುರಿಸುವ ಸಂಭವವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು