Wednesday, May 6, 2026
ಸುದ್ದಿ

ಹೆಲ್ಮೆಟ್ ಧರಿಸದೆ ಖಾಕಿ ಹಾಕಿ ಬೈಕ್ ನಲ್ಲಿ ಸವಾರಿ ಮಾಡಿದ ಉಪ್ಪಿನಂಗಡಿಯ ಫಾರೆಸ್ಟ್‌ ಗಾರ್ಡ್ ಮಹಿಳೆಯ ಫೋಟೋ ವೈರಲ್ ; ದಂಢ ಕಟ್ಟಿದ ಖಾಕಿ ಲೇಡಿ – ಕಹಳೆ ನ್ಯೂಸ್

ಮಂಗಳೂರು : ಉಪ್ಪಿನಂಗಡಿಯಲ್ಲಿ ಫಾರೆಸ್ಟ್‌ ಗಾರ್ಡ್‌ ಆಗಿರುವ ಮಹಿಳೆ ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್‌ ಧರಿಸದೆ ಗಂಡನ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಇದನ್ನು ನೋಡಿದ ಕೆಲವರು ಮೊಬೈಲ್‌ನಲ್ಲಿ ಫೋಟೋ ತೆಗೆದು “ಖಾಕಿ ಸಮವಸ್ತ್ರ ಧರಿಸಿದ ಈ ಮಹಿಳೆ ಹೆಲ್ಮೆಟ್‌ ಹಾಕದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ “ಟ್ರಾಫಿಕ್‌ ನಿಯಮ ಉಲ್ಲಂಘನೆ’ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಮೊಬೈಲ್ ಗಳಲ್ಲಿ ಈ ಪೋಟೋ ಹರಿದಾಡುತ್ತಿದ್ದಂತೆ ನಗರದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೈಕ್ ನಂಬರ್ ಆಧಾರದಲ್ಲಿ ಪತ್ತೆ ಹಚ್ಚಲಾಯಿತು. ನಂತರ ಫಾರೆಸ್ಟ್ ಗಾರ್ಡ್ ಮಹಿಳೆಯನ್ನು ಠಾಣೆಗೆ ಕರೆಸಿ ದಂಡ ವಿಧಿಸಿ ಕಳುಹಿಸಿಕೊಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು