
ಚಾಲಕರಾಗುವವರಿಗೆ ಕರ್ನಾಟಕ ರಾಜ್ಯ ರಸ್ತೆ ನಿಗಮ ಸಿಹಿಸುದ್ದಿ ನೀಡಿದ್ದು, ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ 30 ದಿನ ಉಚಿತವಾಗಿ ಭಾರಿ ಮತ್ತು ಲಘು ವಾಹನ ಚಾಲನಾ ತರಬೇತಿ ಹಾಗೂ ತಾಂತ್ರಿಕ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ ಉತ್ತಿರ್ಣ ಅಥವಾ ಅನುತ್ತೀರ್ಣ ಹೊಂದಿದವರೂ ಅರ್ಜಿ ಸಲ್ಲಿಸಬಹುದು. ಲಘು ವಾಹನ ಚಾಲನಾ ಪರವಾನಗಿಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು.
ಇನ್ನು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಭಾರಿ ವಾಹನಕ್ಕೆ ಕನಿಷ್ಠ 21 ವರ್ಷ ಹಾಗೂ ಲಘು ವಾಹನಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು. ನಾಲ್ಕು ಪಾಸ್ ಪೋರ್ಟ್ ಅಳತೆಯ ಫೋಟೋಗಳು, ಎಸ್‍ಎಸ್‍ಎಲ್.ಸಿ ಉತ್ತೀರ್ಣಗೊಂಡ ಅಂಕಪಟ್ಟಿ, ಬ್ಯಾಂಕ್ ಪಾಸ್ ಬುಕ್, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಡಿಎಲ್.ಎಕ್ ಟ್ರ್ಯಾಕ್ಟ್ ಸಂಬಂಧಿಸಿದ ಸಾರಿಗೆ ಕಚೇರಿಯಿಂದ ಕ್ಲಿಯರನ್ಸ್ ಸರ್ಟಿಫಿಕೇಟ್, ಸಂಬಂಧಿಸಿದ ಸಾರಿಗೆ ಕಚೇರಿಯಿಂದ ಕೆ.ಎ 0 ಕೋರಮಂಗಲ ಸಾರಿಗೆ ಇಲಾಖೆಗೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22221652, 77609-92539, 9066627459 ಸಂಪರ್ಕಿಸಬಹುದು.









