
ಕಲ್ಲಡ್ಕ: 2019-20ನೇ ಸಾಲಿನ ಕೃಷಿ ಸಂಘದ ಉದ್ಘಾಟನೆ ಮತ್ತು ಕೃಷಿ ಚಟುವಟಿಕೆ ಸುಧೆಕ್ಕಾರಿನಲ್ಲಿ ನಡೆಯಿತು. ಸಂಘದ ಉದ್ಘಾಟನೆಯನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿ ಸತೀಶ್ ಶಿವಗಿರಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ನಂತರ ಮಾತನಾಡಿದ ಅವರು ದೇಶದ ಆರ್ಥಿಕತೆಯಲ್ಲಿ ಸಾವಯವ ಕೃಷಿಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳನ್ನು ಸಾವಯವ ಕೃಷಿಗೆ ಪ್ರೋತ್ಸಾಹಿಸಿದರು.

ಕೃಷಿ ಚಟುವಟಿಕೆಗೆ ಚಾಲನೆ ನೀಡಿದ ಪ್ರಗತಿಪರ ಕೃಷಿಕ ಮತ್ತು ಗೋಳ್ತಮಜಲು ಪಂಚಾಯತ್ ಸದಸ್ಯ ಜಯಂತ ಗೌಡ ಮಾತನಾಡಿ ಇಂದಿನ ಕಾಲದಲ್ಲಿ ಕುಟುಂಬ ಪದ್ಧತಿ ಕ್ಷೀಣಿಸುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಸಂತ ಬಲ್ಲಾಳ್, ವೈಷ್ಣವಿ ಟೆಕ್ಸಟೈಲ್ಸ್ ಕಲ್ಲಡ್ಕ ಇದರ ಮಾಲಕ ಪ್ರಶಾಂತ್ ಕಡ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಿರುಮಲೇಶ್ವರ ಪ್ರಶಾಂತ್ ನಿರ್ವಹಿಸಿದರು. ಉಪನ್ಯಾಸಕರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.









