Thursday, May 14, 2026
ಸುದ್ದಿ

ಹುಲಿ ರಾಜ್ಯ ಮಧ್ಯಪ್ರದೇಶದಲ್ಲಿ ಮೂರು ಹುಲಿಗಳ ಸಾವು – ಕಹಳೆ ನ್ಯೂಸ್

ಉಮರಿಯಾ: ಸೋಮವಾರ ಹುಲಿ ಗಣತಿ ಬಿಡುಗಡೆ ಮಾಡಿದ್ದ ಪ್ರಧಾನಿ ಮೋದಿ ದೇಶದಲ್ಲೇ ಅತಿ ಹೆಚ್ಚಿನ ಹುಲಿಗಳನ್ನು ಹೊಂದಿರುವ ರಾಜ್ಯವೆಂದು ಮಧ್ಯಪ್ರದೇಶವನ್ನು ಘೋಷಿಸಿದ್ದರು.

ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿತು. ಆದರೆ ಗಣತಿ ವರದಿ ಬಿಡುಗಡೆಗೊಂಡ ನಾಲ್ಕನೇ ದಿನದಲ್ಲಿ ಮಧ್ಯಪ್ರದೇಶದ ಅಭಯಾರಣ್ಯಗಳಲ್ಲಿ ಪರಸ್ಪರ ಕಾದಾಡಿಕೊಂಡು ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ಹುಲಿ ಮರಿ ಸೇರಿದಂತೆ ಒಟ್ಟು ಮೂರು ಹುಲಿಗಳು ಸಾವನ್ನಪ್ಪಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅರಣ್ಯ ಪ್ರದೇಶದಲ್ಲಿನ ತಮ್ಮ ವ್ಯಾಪ್ತಿ ಹಂಚಿಕೆ ಕುರಿತಾಗಿ ಹುಲಿಗಳು ಪರಸ್ಪರ ಕಾದಾಡುವುದು ಸಾಮಾನ್ಯ. ಹೀಗೆ ಕಾದಾಟದಲ್ಲಿ ಈ ಹುಲಿಗಳು ಸಾವನ್ನಪ್ಪಿವೆ ಎಂದು ಫಾರೆಸ್ಟ್ ರೇಂಜರ್ ಪಿ.ಕೆ.ತ್ರಿಪಾಠಿ ಮಾಹಿತಿ ನೀಡಿದ್ದಾರೆ.