
ಕೆಲವೇ ದಿನಗಳಲ್ಲಿ 20 ರೂಪಾಯಿ ನೋಟು ಓಡಾಡಲಿದೆ. ಹೊಸ ನೋಟಿನ ಬಣ್ಣ ಭಿನ್ನವಾಗಿರಲಿದ್ದು, ಹಳದಿ ಬಣ್ಣದಲ್ಲಿರಲಿದೆ.
ಮಾಧ್ಯಮಗಳ ವರದಿ ಪ್ರಕಾರ, ಹೊಸ ನೋಟುಗಳು ಈಗಾಗಲೇ ಕಾನ್ಪುರದ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಬಂದಿದೆಯಂತೆ. ಶೀಘ್ರವೇ ಬ್ಯಾಂಕ್ ಶಾಖೆಗಳಿಗೆ ಹೊಸ ನೋಟು ಬರಲಿದೆ. ಮಹಾತ್ಮಾ ಗಾಂಧಿಯವರ ಹೊಸ ಸರಣಿಯಡಿಯಲ್ಲಿ ಹೊಸ ನೋಟು ಮುದ್ರಣವಾಗಿದೆ.
ಹೊಸ 20 ರೂಪಾಯಿ ಮಾರುಕಟ್ಟೆಗೆ ಬಂದ್ರೂ ಹಳೆ 20 ರೂಪಾಯಿ ನೋಟು ಮಾರುಕಟ್ಟೆಯಲ್ಲಿರಲಿದೆ. ಗ್ರಾಹಕರಿಗೆ ಹಳೆ ನೋಟು ಚಲಾವಣೆ ರದ್ದಾಗಲಿದೆ ಎಂಬ ಆತಂಕ ಬೇಡವೆಂದು ಆರ್.ಬಿ.ಐ. ಹೇಳಿದೆ. ಹಳೆ ನೋಟಿಗಿಂತ ಹೊಸ ನೋಟು ಗಾತ್ರದಲ್ಲಿ ಸ್ವಲ್ಪ ಸಣ್ಣದಿದೆ. ಹೊಸ ನೋಟಿನ ಆಕಾರ 63mmx129mm ಇರಲಿದೆ. ಬಣ್ಣ ಮಾತ್ರ ಬದಲಾಗಲಿದ್ದು, ಉಳಿದ ಎಲ್ಲಾ ವೈಶಿಷ್ಟ್ಯಗಳು ಹಳೆ ನೋಟಿನಂತೆ ಇರಲಿದೆ.









