Saturday, May 9, 2026
ಸುದ್ದಿ

‘ಕಾಫಿ ಡೇ’ ಕಂಪೆನಿಗೆ ಹೊಸ ಆಡಳಿತ ಮಂಡಳಿ ನೇಮಕ – ಕಹಳೆ ನ್ಯೂಸ್

ಬೆಂಗಳೂರು : ಕಾಫಿ ಡೇ ಸಾಮ್ರಾಟ್ ವಿ.ಜಿ ಸಿದ್ಧಾರ್ಥ್ ಸಾವಿನ ಹಿನ್ನಲೆಯಲ್ಲಿ ಕಾಫಿ ಡೇ ಕಂಪನಿಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ಕಾಫಿ ಡೇ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಬಳಿಕ ಇದೀಗ ಕಾಫಿ ಡೇಗೆ ಹೊಸ ಆಡಳಿತ ಮಂಡಳಿಯನ್ನು ರಚಿಸಿದ್ದು, ಹಂಗಾಮಿ ಅಧ್ಯಕ್ಷರಾಗಿ ಎಸ್ ವಿ ರಂಗನಾಥ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಫಿ ಡೇ ಕಂಪನಿ ಮುಚ್ಚಲ್ಪಡುತ್ತದೆ ಎಂದು ಸುದ್ದಿ ಹರಿದಾಡುತ್ತಿತ್ತು. ಈ ಕುರಿತು ಕಾಫಿ ಡೇ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಾಫಿ ಡೇ ಕಂಪನಿಯನ್ನು ಮುಚ್ಚುವುದಿಲ್ಲ. ಮುನ್ನಡೆಸಿಕೊಂಡು ಹೋಗಾಲುತ್ತದೆ ಎಂದು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನಕ್ಕೆ ಬರಲಾಗಿತ್ತು.

ಈ ಹಿನ್ನಲೆಯಲ್ಲಿ, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿನಿಂದಾಗಿ, ಕಾಫಿ ಡೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲು ನೂತನ ಹಂಗಾಮಿ ಅಧ್ಯಕ್ಷರನ್ನು ಮಂಡಳಿ ಸಭೆಯಲ್ಲಿ ನೇಮಕ ಮಾಡಲಾಗಿದೆ. ಇಂದು ನಡೆದ ಕಾಫಿ ಡೇ ಬೋರ್ಡ್ ಆಫ್ ಡೈರಕ್ಟರ್ಸ್ ಸಭೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಎಸ್ ವಿ ರಂಗನಾಥ್ ಅವರನ್ನು ಆಯ್ಕೆ ಮಾಡಲಾಗಿದ್ದು, ನಿರ್ದೇಶಕ ನಿತಿನ್ ಬಾಗಮನೆ ಅವರನ್ನು ಕಾಫಿ ಡೇ ಸಿಒಒ ಆಗಿ ನೇಮಕಮಾಡಲಾಗಿದೆ. ಈ ಮೂಲಕ ಕಾಫಿ ಡೇ ಕಂಪನಿ ಮುಚ್ಚುವುದಿಲ್ಲ, ಮುಂದುವರೆಯುತ್ತದೆ ಎಂಬುದನ್ನು ಸಾಕ್ಷೀಕರಿಸಿದೆ.