Recent Posts

Sunday, April 26, 2026
ಸುದ್ದಿ

ಬಾಯಾರ್ ಮಂಗಳೂರು ಬಸ್ ಸಂಚಾರ ಆರಂಭ | ಜನತೆಯ ಬಹು ಕಾಲದ ಕನಸು ನನಸು

 

ಮಂಜೇಶ್ವರ : ಪೈವಳಿಕೆ ಗ್ರಾಮ ಪಂಚಾಯತ್ ನ ಗ್ರಾಮೀಣ ಪ್ರದೇಶವಾದ ಬಾಯಾರ್, ಮುಳಿಗದ್ದೆ, ಕನಿಯಾಲ, ಬೆರಿಪದವು, ಬಳ್ಲೂರು, ಲಾಲ್ಭಾಗ್, ಪೈವಳಿಕೆ, ಹಾಗೂ ಮೀಂಜ ಮತ್ತು ಮಂಗಲ್ಪಾಡಿ ಪಂಚಾಯತ್ ಗೊಳಪಟ್ಟ ಅಟ್ಟಗೋಳಿ, ಜೋಡುಕಲ್ಲು, ಕನ್ನಟ್ಟೀಪ್ಪಾರೆ, ಬೇಕೂರು, ಪ್ರತಾಪ ನಗರ, ಪರಿಸರವಾಸಿಗಳ ಬಹು ಕಾಲದ ಕನಸು ಇಂದು ನನಸಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಾಯಾರ್ ಪ್ರದೇಶದ ನಿವಾಸಿಗಳಿಗೆ ಮಂಗಳೂರು ತಲುಪಬೇಕಾದರೆ ಸರ್ವಿಸ್ ಬಸ್ ಗಳಲ್ಲಿ ಉಪ್ಪಳ ತಲುಪಿ, ಬಳಿಕ ರೈಲು ಅಥವಾ ಬಸ್ ಮುಖಾಂತರ ಮಂಗಳೂರು ತೆರಳುತ್ತಿದ್ದರು. ಆದರೆ ಇಂದಿನಿಂದ ಈ ಗ್ರಾಮಕ್ಕೆ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರ ಪ್ರಾರಂಭಿಸುವ ಮೂಲಕ ಗ್ರಾಮೀಣರ ಹಲವು ವರ್ಷಗಳ ಬಯಕೆಯು ಇಂದು ಈಡೇರಿತು.

ಮಂಗಳೂರಿನಿಂದ ಬಸ್ ಬೆಳಗ್ಗೆ 6.25, 10.10, ಅಪರಾಹ್ನ:- 2.20 ಕ್ಕೆ ಬಾಯರ್ ಕಡೆ ಹೊರಟರೆ, ಬಾಯರ್ ನಿಂದ ಬಸ್ ಬೆಳಗ್ಗೆ 8.02, ಅಪರಾಹ್ನ :- 12.00, ಸಂಜೆ :- 04.33 ಕ್ಕೆ ಹೊರಡಲಿದೆ.ಬಸ್ ಸಂಚಾರ ವೇಳೆ ಇಂದು ಬೆಳಗ್ಗೆ ಬಾಯಾರ್ ರೂಟ್ ನ ವಿವಿದೆಡೆ ಬಸ್ ಗೆ ಸ್ವಾಗತ ನೀಡಲಾಯಿತು.