Saturday, May 2, 2026
ಸುದ್ದಿ

ಬ್ರೇಕಿಂಗ್ : ‘ಐಎಂಎ ಬಹುಕೋಟಿ ವಂಚನೆ’ ಪ್ರಕರಣ : ಶಿವಾಜಿನಗರದ ರೌಡಿ ಶೀಟರ್ ಹಾಗೂ ಶಾಸಕ ರೋಷನ್ ಬೇಗ್ ಆಪ್ತನಾಗಿದ್ದ ಇಸ್ತಿಯಾಕ್ ಅಹ್ಮದ್ ಬಂಧನ – ಕಹಳೆ ನ್ಯೂಸ್

ಬೆಂಗಳೂರು : ಇತ್ತೀಚಿಗಷ್ಟೇ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಇಡಿ ಬಂಧಿಸಿ, ವಶಕ್ಕೆ ಪಡೆದ ಬೆನ್ನಲ್ಲೇ, ಇದೀಗ ಇದೇ ಪ್ರಕರಣದಲ್ಲಿ ಶಿವಾಜಿನಗರ ಬಿಬಿಎಂಪಿ ಸದಸ್ಯೆಯ ಪತಿಯೊಬ್ಬರನ್ನು ಎಸ್ ಐ ಟಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಾಜಿನಗರದ ಕಾರ್ಪೋರೇಟರ್ ಪರೀಧಾ ಅವರ ಪತಿ ಇಸ್ತಿಯಾಕ್ ಅಹ್ಮದ್ ಅವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಾಜಿನಗರದ ರೌಡಿ ಶೀಟರ್ ಹಾಗೂ ಶಾಸಕ ರೋಷನ್ ಬೇಗ್ ಆಪ್ತನಾಗಿದ್ದ ಇಸ್ತಿಯಾಕ್ ಅಹ್ಮದ್, ಐಎಂಎ ಸಂಸ್ಥಾಪಕ ಮನ್ನೂರ್ ಖಾನ್ ಅವರಿಂದ ಎರಡು ಕೋಟಿ ಪಡೆದು, ಹಿಂದಿರುಗಿಸಿರಲಿಲ್ಲ. ಈ ಕುರಿತು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನಿಂದ ಖಚಿತ ಮಾಹಿತಿ ಪಡೆದಿರುವ ಎಸ್ ಐ ಟಿ ಪೊಲೀಸರು, ಇಸ್ತಿಯಾಕ್ ಅಹ್ಮದ್ ಅವರನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.