
ಮಂಗಳೂರು ಜಿಲ್ಲಾ ವ್ಯಾಪ್ತಿಯ ಕ್ಯಾಮರಾ ಮ್ಯಾನ್ ನಾಗೇಶ್ ಮಹಾಮಾರಿ ಡೆಂಗ್ಯೂಗೆ ಬಲಿಯಾಗಿದ್ದಾರೆ.
ನಾಗೇಶ್ ಹಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಜುಲೈ 21ರಂದು ಅಸುನೀಗಿದ್ದಾರೆ. ನಾಗೇಶ್ ಅವರು ನೀರುಮಾರ್ಗ ಸಮೀಪದ ಪಡು ಎಂಬಲ್ಲಿನ ನಿವಾಸಿಯಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.
ಉತ್ತಮ ಆಟಗಾರ, ಪತ್ರಕರ್ತರ ಬಳಗದಲ್ಲಿ ಬಹಳಷ್ಟು ಮಿತ್ರರನ್ನು ಹೊಂದಿದ್ದರು. ಮೃತ ನಾಗೇಶ್, ಪುಟ್ಟ ಮಗು, ಪತ್ನಿ, ತಂದೆ-ತಾಯಿ, ಸಹೋದರ ಸಹೋದರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.









