ನಾಣ್ಯ ಶ್ರೀನಾಗ ರಕ್ತೇಶ್ವರಿ ಕ್ಷೇತ್ರದ ಅಷ್ಟ ಪವಿತ್ರ ನಾಗಮಂಡಲೋತ್ಸವದ ಸಂಚಲನ ಸಮಿತಿಯ ಕಾರ್ಯಾಲಯದ ಉದ್ಘಾಟನೆ – ಕಹಳೆ ನ್ಯೂಸ್

ಶ್ರೀನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ಪುದು ಇಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವಕ್ಕೆ ಈಗಾಗಲೇ ದಿನ ನಿಗದಿಯಾಗಿದ್ದು ಸಂಚಲನ ಸಮಿತಿ ರಚನೆಯಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪ ಕಾರ್ಯಾಲಯವನ್ನು ತೆರೆಯಲಾಗಿದ್ದು ಇದರ ಉದ್ಘಾಟನೆಯನ್ನು ಚೌಟ ಗ್ಯಾಸ್ ಏಜನ್ಸಿಯ ಮಾಲಕ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಚೌಟರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಯ ಪ್ರಕಾಶ್ಚಂದ್ರ ರೈ, ಸದಾನಂದ ಆಳ್ವ ಕಂಪ, ಭಾಸ್ಕರ ಚೌಟ ಕುಂಭ್ಡೇಲು, ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು, ಐತಪ್ಪ ಆಳ್ವ ಸುಜೀರ್ ಗುತ್ತು, ಪೂವಪ್ಪ ಕುಲಾಲ್ ನಾಣ್ಯ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಕೊಡಮಣ್ಣು ಕಾಂತಪ್ಪ ಶೆಟ್ಟಿ, ವಿಠ್ಠಲ್ ಸಾಲ್ಯಾನ್ ಕುಂಭ್ಡೇಲು, ಪ್ರಕಾಶ್ ಕಿದೆ ಬೆಟ್ಟು , ಗಂಗಾಧರ ಕೋಟ್ಯಾನ್ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ ಮೇರಮಜಲು, ತಾರಾನಾಥ್ ಕೊಟ್ಟಾರಿ, ಮನೋಜ್ ಆಚಾರ್ಯ ಕಟ್ಟಡದ ಮಾಲಕ ಮೋಹನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.









