Saturday, May 9, 2026
ಸುದ್ದಿ

ಇಂಡೋನೇಷ್ಯಾ ಓಪನ್ ಪಂದ್ಯಾವಳಿಯಲ್ಲಿ ಪಿ ವಿ ಸಿಂಧುಗೆ ರನ್ನರ್ ಅಪ್ ಸ್ಥಾನ – ಕಹಳೆ ನ್ಯೂಸ್

ಜಕಾರ್ತಾ: ಇಂಡೋನೇಷ್ಯಾ ಓಪನ್ ಪಂದ್ಯಾವಳಿಯ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು ಜಪಾನ್‍ನ ಅಕಾನೆ ಯಮಗುಚಿ ಎದುರು ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಸಿಂಧೂ ಯಮಗುಚಿ ಅವರ ವಿರುದ್ಧ 15-21 16-21ರ ನೇರ ಸೆಟ್‍ಗಳಿಂದ ಪರಾಜಿತರಾದರು. ಒಲಂಪಿಕ್ ಬೆಳ್ಳಿ ಪದಕ ವಿಜೇತರಾದ ಸಿಂಧು ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಚೀನಾದ ಚೆನ್ ಯೂಫಿ ಅವರನ್ನು 21-19, 21-10 ಅಂತರದಲ್ಲಿ ಪರಾಜಿತಗೊಳಿಸಿ ಫೈನಲ್ ಪ್ರವೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಸಿಂಗಾಪುರ ಮತ್ತು ಇಂಡಿಯಾ ಓಪನ್‍ನಲ್ಲಿ ಸೆಮಿಫೈನಲ್‍ಗೆ ತಲುಪಿದ ವಿಶ್ವದ ಐದನೇ ಕ್ರಮಾಂಕದ ಭಾರತೀಯ ಆಟಗಾರ್ತಿ ಸಿಂಧೂ ಪಾಲಿಗೆ ಇದು ಈ ವರ್ಷದ ಅತ್ಯುತ್ತಮ ಪ್ರದರ್ಶನವಾಗಿದೆ.