
ಅಧಿಕಾರಿಯ ಮನೆಯವರು, ಸಂಬಂಧಿಕರು ಅಥವಾ ಸ್ನೇಹಿತರು ಎಂದ ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ನೈನಿತಾಲ್‍ನ ಜಿಲ್ಲಾಧಿಕಾರಿ ಸವಿನ್ ಬನ್ಸಲ್ ಅವರ ಪತ್ನಿ ಅವರ ಪತಿ ಜಿಲ್ಲಾಧಿಕಾರಿ ಎಂಬ ಯಾವುದೇ ದರ್ಪ ತೋರದೆ, ವಿಶೇಷ ಸೌಲಭ್ಯಗಳಿಗೆ ಆಸೆ ಪಡದೆ ಸಾಮಾನ್ಯ ಪೌರರಂತೆ ಆಕೆ ತಾನೂ ಕೂಡ ಕ್ಯೂನಲ್ಲೇ ನಿಂತುಕೊಂಡು ಔಷಧಿ ತೆಗೆದುಕೊಂಡ ಕಾರ್ಯಕ್ಕೆ ಇದೀಗ ಈ ಬಗ್ಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ.

ಸವೀನ್ ಬನ್ಸಲ್ ಅವರ ಪತ್ನಿ ಸುರಭಿ ಬನ್ಸಲ್ ಶುಕ್ರವಾರ ತಮ್ಮ ಮಗುವಿಗೆ ಚಿಕಿತ್ಸೆಗಾಗಿ ಬೀಡಿ ಪಾಂಡೆ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಆಕೆ ತಾನು ಡಿ.ಸಿ ಯವರ ಪತ್ನಿ ಎಂಬ ಪರಿಚಯವನ್ನು ಮಾಡಿಸದೇ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಸ್ಲಿಪ್ ಎಲ್ಲರಂತೆ ಅರ್ಧ ಗಂಟೆ ಕಾದು ನಂತರ ವೈದ್ಯರನ್ನು ಭೇಟಿಯಾಗಿದ್ದಾರೆ.
ಅದಾದ ಸ್ವಲ್ಪ ಹೊತ್ತಿನಲ್ಲೇ ಜಿಲ್ಲಾಧಿಕಾರಿಯು ಆಸ್ಪತ್ರೆಗೆ ಬಂದಿದ್ದು, ಆಕೆ ಯಾವುದೇ ವಿಐಪಿ ಸೌಲಭ್ಯ ಬಳಸದೇ ತಮ್ಮ ಮಗುವಿಗೆ ಸಾಮಾನ್ಯರಂತೆ ಚಿಕಿತ್ಸೆ ಕೊಡಿಸಿರುವ ವಿಷಯ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.









