
ಮಂಗಳೂರು: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30ಕ್ಕೂ ಅಧಿಕ ಯುವಕ ಯುವತಿಯರಿಂದ ರೂ.6ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದ ಹಿನ್ನಲೆಯಲ್ಲಿ ಪುತ್ತೂರಿನ ಕೆಮ್ಮಿಂಜೆ ನಿವಾಸಿ ಯತೀಶ್(28) ಇವರನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಯ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯತೀಶ ಕುಮಾರ್, ಈತ ಶೋಕಿ ಜೀವನಕ್ಕಾಗಿ ಹಣ ಮಾಡುವ ಉದ್ದೇಶದಿಂದ ಏರ್ ಟಿಕೆಟ್ ಮತ್ತಿತ್ತರ ಏವಿ ಏಷನ್ ಕೋರ್ಸ್ ಮುಗಿಸಿ ಕೆಲಸ ಹುಡುಕುತ್ತಿರುವ ಯುವಕ ಯುವತಿಯನ್ನು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ.

\ಒಬ್ಬರಿಗೆ ತಲಾ 28000 ರೂ ಹಣ ಪಡೆದು ಜೂ.7 ರಂದು ಕೇರಳದಲ್ಲಿ ಸಂದರ್ಶನವಿರುವುದಾಗಿ ನಂಬಿಸಿ ತದನಂತರ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿರುವುದಾಗಿ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಸುರತ್ಕಲ್ ಠಾಣಾ ಪೊಲೀಸರು ಕದ್ರಿ ಪಾರ್ಕ್ ಬಳಿ ಬಂಧಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.









