ಮಂಗಳೂರಿನ ವಿದ್ಯಾರ್ಥಿಗಳ ಹೊಸ ಪರಿಸರ ಸ್ನೇಹಿ ಪ್ಲಾನ್; ಪೇಪರ್ ಬ್ಯಾಗ್ ತಯಾರಿಸಿದ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಮಂಗಳೂರು: ಪರಿಸರ ಸ್ವಚ್ಛವಾಗಿರಿಸಲು ಅನೇಕ ಸಂಶೋಧನೆಗಳು ನಡೆಯುತ್ತಿದೆ. ಆದರೆ ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ತಡೆಗಟ್ಟಲು ಸಾದ್ಯವಾಗುತ್ತಿಲ್ಲ. ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಸಬೇಡಿ ಎಂಬ ಕರೆಯನ್ನು ವಿನೂತನವಾಗಿ ನೀಡಿದ್ದಾರೆ.

ಮಂಗಳೂರು ನಗರದ ಕೆನರಾ ಹೈಯರ್ ಪ್ರೈಮರಿ ಸ್ಕೂಲ್‍ನ ವಿದ್ಯಾರ್ಥಿಗಳು ಪ್ಲಾಸ್ಟಿಕ್‍ಗೆ ವಿಮುಕ್ತಿ ಹಾಡಲು ಮುಂದಾಗಿದ್ದಾರೆ. ಹಳೆ ನ್ಯೂಸ್ ಪೇಪರ್ ಗಳನ್ನು ಬಳಸಿಕೊಂಡು ಪೇಪರ್ ಬ್ಯಾಗ್ ತಯಾರಿಸಿದ್ದಾರೆ. ಮತ್ತು ತಯಾರಿಸಿದ ಬ್ಯಾಗನ್ನ ಅಂಗಡಿಗಳಿಗೆ ಹಂಚಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.









