Monday, September 7, 2026
ಕ್ರೀಡೆ

ವಿಶ್ವಕಪ್‍ನಲ್ಲಿ ಹೊಸ ದಾಖಲೆಯತ್ತ ವಿರಾಟ್ – ಕಹಳೆ ನ್ಯೂಸ್

ಮ್ಯಾಂಚೆಸ್ಟರ್: ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಭಾರತದ ಟೀಮ್‍ನ ನಾಯಕ ವಿರಾಟ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗದ 20,000 ರನ್ ಗಳಿಸಿದ ದಾಖಲೆ ಮಾಡಿದರು. ಇದಕ್ಕಿಂತ ಮುಂಚೆ ಈ ದಾಖಲೆಯನ್ನು ಬ್ರೈನ್ ಲಾರಾ ಹಾಗೂ ಸಚಿನ್ ತೆಂಡುಲ್ಕರ್ ಬರೆದಿದ್ದರು. ಆದರೆ ಇದೀಗ ಎರಡು ಮಂದಿಯ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ.

ಜಾಹೀರಾತು

ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಕೊಹ್ಲಿ 37 ರನ್ ಗಳಿಸುತ್ತಿದ್ದಂತೆ 20 ಸಾವಿರ ರನ್ ದಾಖಲೆ ಸೃಷ್ಟಿಯಾಯಿತು. ಈಚೆಗಷ್ಟೇ ಏಕದಿನ ಕ್ರಿಕೆಟ್‍ನಲ್ಲಿ ವೇಗದ 11 ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದರು. ಸಚಿನ್ ಮತ್ತು ಲಾರಾ ಇಬ್ಬರೂ 453 ಇನ್ನಿಂಗ್ಸ್‍ಗಳಲ್ಲಿ 20 ಸಾವಿರ ರನ್ ಗಡಿ ದಾಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈವರೆಗೆ ಕೊಹ್ಲಿ ಒಟ್ಟು 417 ಇನ್ನಿಂಗ್ಸ್ ಆಡಿದ್ದು, ಇದರಲ್ಲಿ ಟೆಸ್ಟ್‍ನ 131, ಏಕದಿನದ 233 ಹಾಗೂ ಟಿ-20ಯ 62 ಇನ್ನಿಂಗ್ಸ್ ಸೇರಿವೆ. ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಿದ ಭಾರತದ ಮೂರನೇ ಮತ್ತು ವಿಶ್ವ ಕ್ರಿಕೆಟ್‍ನ 12ನೇ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತದ ಪರ ಸಚಿನ್ (34,357 ರನ್) ಮತ್ತು ರಾಹುಲ್ ದ್ರಾವಿಡ್ (24,208 ರನ್) 20 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಇದೇ ಪಂದ್ಯದಲ್ಲಿ ಕೊಹ್ಲಿ 91 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ತಂಡದ ಎದುರು ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ (1840) ಗಳಿಸಿದ ದಾಖಲೆಯೂ ಕೊಹ್ಲಿ ಪಾಲಾಗಲಿದೆ. ಸದ್ಯ ಈ ದಾಖಲೆ ಪಾಕಿಸ್ತಾನದ ಜಾವೇದ್ ಮಿಯಾಂದಾದ್ (1930) ಹೆಸರಿನಲ್ಲಿದೆ.