
ಕೊಕ್ಕಡ : ನೆಲ್ಯಾಡಿ ಗ್ರಾಮದ ಮಾರಂಕೊಡಿ ಎಂಬಲ್ಲಿ ಮದುವೆ ಮನೆಗೆ ಬಂದಿದ್ದ ಸಂಬಂಧಿಕನಾದ ಸುಂದರ್ ಎಂಬಾತ ಮದುವೆ ಮನೆಯಿಂದ ಚಿನ್ನಾಭರಣ ಹಾಗೂ ಕವರ್ ನಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಆದರೆ ಆ ಘಟನೆ ಅಲ್ಲಿಯ ಯುವಕರಿಗೆ ತಿಳಿದುಬಂದಿದ್ದು ಸುಂದರ್ ನನ್ನು ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.








