
ಬಂಟ್ವಾಳ ಪುರಸಭೆ ಮತ್ತು ಮಂಗಳೂರಿಗೆ ನೀರು ಪೂರೈಸುವ ಬಂಟ್ವಾಳ ಜಾಕ್ವೆಲ್ ಮತ್ತು ತುಂಬೆ ಡ್ಯಾಮ್‍ಗೆ ನೀರು ಹರಿಸಲು ಡ್ರಜ್ಜಿಂಗ್ ಯಂತ್ರದ ಮೂಲಕ ಕಾಮಗಾರಿ ನಡೆದಿದೆ. ಇಲ್ಲಿಗೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮತ್ತು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.











