
ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಅಂಜನಾ ವಶಿಷ್ಠ, ಬ್ಯಾಂಕ್ ನೌಕರಿ ಪರೀಕ್ಷೆಗೆಂದು ಮಂಗಳೂರಿಗೆ ಬಂದಿದ್ದರು. ಜೊತೆಗೆ ವಿಜಯಪುರ ಜಿಲ್ಲೆಯ ಸಿಂಧಗಿ ನಿವಾಸಿ ಸಂದೀಪ್ ರಾಥೋಡ್ ಪಿಎಸ್ ಐ ಪರೀಕ್ಷೆ ಬರೆಯಲು ಬಂದಿದ್ದರು. ಇಬ್ಬರು ಐದು ದಿನಗಳ ಹಿಂದೆ ದಂಪತಿ ಸೋಗಿನಲ್ಲಿ ಮಂಗಳೂರಿನ ಅತ್ತಾವರದಲ್ಲಿ ಬಾಡಿಗೆ ಕೊಠಡಿ ಪಡೆದಿದ್ದರು . ಆದರೆ ನಿನ್ನೆ ಸಂಜೆ ಕೊಠಡಿ ಬಾಗಿಲು ತೆರೆದಾಗ ಕೊಲೆ ಪ್ರಕರಣ ಬಯಲಾಗಿತ್ತು. ನಿನ್ನೆ ಬೆಳಗ್ಗೆ ಅಂಜನಾಳನ್ನು ಕೊಲೆಗೈದು ಕೊಠಡಿಗೆ ಹೊರಗಿಂದ ಬಾಗಿಲು ಹಾಕಿ ಸಂದೀಪ್ ರಾಥೋಡ್ ಪರಾರಿಯಾಗಿದ್ದರು. ಅಂಜನಾಳಿಗೆ ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ತಯಾರಿಯಲ್ಲಿದ್ದರು. ಇದನ್ನು ತಿಳಿದ ಮಂಗಳೂರು ಪೊಲೀಸರು ಆರೋಪಿಯನ್ನು 18ಗಂಟೆ ಒಳಗೆ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸಿಂಧಗಿಯಲ್ಲಿ ಪೊಲೀಸರಿಂದ ಸಂದೀಪ್ ರಾಥೋಡ್ ಬಂಧನ ಮಾಡಲಾಗಿದೆ.








