Tuesday, April 28, 2026
ಸುದ್ದಿ

ದೇಶದೆಲ್ಲೆಡೆ ಕಮಲ ಅರಳಿಸಿದ ನರೇಂದ್ರ ಮೋದಿ ಅವರಿಗೆ ಇಂದು ಕಮಲದ ಹೂಗಳಿಂದ ತುಲಾಭಾರ-ಕಹಳೆ ನ್ಯೂಸ್

ತಿರುವನಂತಪುರಂ: ಲೋಕಸಭೆ ಚುನಾವಣೆಯಲ್ಲಿ ದೇಶದೆಲ್ಲೆಡೆ ಕಮಲ ಅರಳಿಸಿದ ನರೇಂದ್ರ ಮೋದಿ ಅವರಿಗೆ ಇಂದು ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಕೇರಳದ ಶ್ರಿಶೂರ್‍ನ ಪ್ರಸಿದ್ಧ ಗುರುವಾಯುರ್ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಜೊತೆಗೆ ಮೋದಿ ಅವರು ಇಲ್ಲಿ ವಿಶೇಷ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು.

ಮೋದಿ ಅವರು ದೇವಾಲಯದಲ್ಲಿ ಭಕ್ತಿ-ಭಾವದಿಂದ ಪೂಜೆ ಮಾಡುತ್ತಿರುವ, ದೇವಾಲಯ ಪ್ರದಕ್ಷಿಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅವರು ಸಹ ಪೂಜೆಯ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರು ಕೇರಳ ಶೈಲಿಯಲ್ಲಿಯೇ ಪಂಚೆ, ಶಲ್ಯ ಧರಿಸಿ ದೇವರ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಅವರೊಂದಿಗೆ ಕೆಲವು ಕೇಂದ್ರ ಸಚಿವರು, ಪಕ್ಷದ ವರಿಷ್ಠರು ಭಾಗಿಯಾಗಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆದ ನಂತರ ಮೋದಿ ಅವರದ್ದು ಇದು ಮೊದಲ ದೇವಸ್ಥಾನ ಭೇಟಿಯಾಗಿದೆ. ಲೋಕಸಭೆ ಚುನಾವಣೆಯ ಮತದಾನ ಮುಗಿದ ಬಳಿಕ ಅವರು ಕೇದಾರನಾಥ ದೇವಾಲಯಕ್ಕೆ ಹೋಗಿದ್ದರು. ಆ ನಂತರ ಈಗ ಅವರು ಕೇರಳದ ಗುರುವಾಯೂರ್ ದೇವಾಲಯಕ್ಕೆ ಆಗಮಿಸಿದ್ದಾರೆ.