Tuesday, April 28, 2026
ಸುದ್ದಿ

ಮಲ್ಪೆ ಬಂದರಿನಲ್ಲಿ ಫರಂಗಿಪೇಟೆ ಗ್ರಾಪಂ ಸದಸ್ಯನ ಮೇಲೆ ತಲವಾರು ದಾಳಿ – ಕಹಳೆ ನ್ಯೂಸ್

ಮಲ್ಪೆ: ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಮೀನು ವ್ಯಾಪಾರಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿರುವ ಘಟನೆ ಇಂದು ಬೆಳಗಿನ ಜಾವ ಮಲ್ಪೆ ಬಂದರಿನಲ್ಲಿ ನಡೆದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಮಂಗಳೂರು ಫರಂಗಿಪೇಟೆಯ ರಿಯಾಝ್(32) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಫರಂಗಿಪೇಟೆ ಗ್ರಾಪಂ ಸದಸ್ಯರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಿಯಾಝ್ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಂದು ನಸುಕಿನ ವೇಳೆ ಇತರ ಮೂವರೊಂದಿಗೆ ಮೀನಿನ ವಾಹನದಲ್ಲಿ ಮಲ್ಪೆ ಬಂದರಿಗೆ ಆಗಮಿಸಿದ್ದರು. ಬಂದರಿನಲ್ಲಿ ನಿಲ್ಲಿಸಿದ್ದ ಮೀನಿನ ವಾಹನದಿಂದ ಇತರರು ಇಳಿದು ಹೋಗಿದ್ದು ರಿಯಾಝ್ ಮಾತ್ರ ಅದರಲ್ಲೆ ಮಲಗಿದ್ದರು.

ಮೀನಿನ ವಾಹನವನ್ನು ಮಂಗಳೂರಿನಿಂದ ಫಾಲೊ ಮಾಡಿಕೊಂಡು ಬಂದ ದುಷ್ಕರ್ಮಿಗಳು ಮುಖ ಮುಚ್ಚಿಕೊಂಡು ಹೊಂಚು ಹಾಕಿ ತಲವಾರಿನಿಂದ ದಾಳಿ ನಡೆಸಿದ್ದಾರೆ. ದಾಳಿಯಿಂದ ರಿಯಾಝ್ ಕುತ್ತಿಗೆಯ ಭಾಗಕ್ಕೆ ಗಾಯಾವಾಗಿದ್ದು, ಕೈ ಬೆರಳೊಂದು ತುಂಡಾಗಿರುವುದಾಗಿ ತಿಳಿದು ಬಂದಿದೆ. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಎಸ್ಸೈ ಮಧು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.