
ಮೂಡಬಿದ್ರೆ: ಪುತ್ತಿಗೆಯ ಸಾರ್ವಜನಿಕ ರಸ್ತೆಯು ಹದಗೆಟ್ಟಿದ್ದು ಅಲ್ಲಲ್ಲಿ ಗುಂಡಿಯಾಗಿತ್ತು. ಇದರ ಬಗ್ಗೆ ಸ್ಥಳೀಯರು ಮುಲ್ಕಿ, ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಬಳಿ ದೂರು ಸಲ್ಲಿಸಿದ್ದರು. ತಮ್ಮ ಕಾರ್ಯಕರ್ತರ ಒಂದು ಕಾಲ್ ಕರೆಗೆ ಸ್ಪಂದಿಸಿ ಸಾರ್ವಜನಿಕ ರಸ್ತೆ ಪುತ್ತಿಗೆಯ ಬೀಡು ರಸ್ತೆಯನ್ನು ತ್ವರಿತಗತಿಯಲ್ಲಿ ದುರಸ್ಥಿ ಮಾಡಿ ಕೊಟ್ಟು ಸಾರ್ವಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ. ತಮ್ಮ ಹೆಮ್ಮೆಯ ಶಾಸಕರಿಗೆ ಪುತ್ತಿಗೆ ಪದವಿನ ಸಮಸ್ತ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೃದಯ ಪೂರ್ವಕವಾಗಿ ಅಭಿನಂದನೆಗಳ ಮಹಾಪೂರವನ್ನು ಹರಿಸಿದ್ದಾರೆ.












