
ಬಂಟ್ವಾಳ: ಮೂಡ ಗ್ರಾಮದ ತಲಪಾಡಿ ಬಳಿಯ ದುರ್ಗಾ ಗ್ಯಾರೇಜ್ ಬಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾ.ನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ದಿ.ಅಬುಬಕ್ಕರ್ ಅವರ ಮಗ ಸಂಶುದ್ಧಿನ್ ಬಂಧಿತ ಆರೋಪಿಯಾಗಿದ್ದಾನೆ.

ಖಚಿತ ಮಾಹಿತಿಯನ್ನು ಆಧರಿಸಿ ಬಂಟ್ವಾಳ ನಗರ ಠಾಣೆಯ ಎಸ್ ಐ ಚಂದ್ರಶೇಖರ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಉಳ್ಳಾಲದ ಮಿಸ್ಬಾ ಎಂಬಾತನಿಂದ ಉಪ್ಪಿನಂಗಡಿಯ ಒರ್ವ ವ್ಯಕ್ತಿಯ ಮುಖಾಂತರ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತನಿಖೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ 1.896 ಕೆ.ಜಿ. ಗಾಂಜಾ, ಮೊಬೈಲ್, ನಗದು 110 ರೂ ವನ್ನು ವಶಪಡಿಸಲಾಗಿದ್ದು, ಇದರ ಮೌಲ್ಯ 40.000/- ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.









