Tuesday, April 28, 2026
ಸುದ್ದಿ

ಗಂಡನನ್ನೇ ಕೊಂದ ಹೈನಾತಿ ಹೆಂಡ್ತಿ- ಕಹಳೆ ನ್ಯೂಸ್

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಲೆ ಮಾಡಿದ ಘಟನೆ ನಗರದ ಚಂದಾಪುರ ಸಮೀಪದ ಸೂರ್ಯಸಿಟಿ ಬಸ್ ಡಿಪೋ ಬಳಿ ನಡೆದಿದೆ. ಬಾಗೇಪಲ್ಲಿ ಮೂಲದ ಶ್ರೀನಿವಾಸ್ ಕೊಲೆಯಾದ ವ್ಯಕ್ತಿ. ಆತ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಶ್ರೀನಿವಾಸ್ ಪತ್ನಿ ಪ್ರತಿಭಾ ಹಾಗೂ ಬಾಲಕೃಷ್ಣ ಕೊಲೆ ಆರೋಪಿಗಳು. ಶ್ರೀನಿವಾಸ್ ಹಾಗೂ ಪ್ರತಿಭಾ ದಂಪತಿ ಚಂದಾಪುರ ಸಮೀಪದ ಹಿಲಲಿಗೆ ಗ್ರಾಮದಲ್ಲಿ ವಾಸವಿದ್ದರು. ಕೆಲ ಕಾಲದಿಂದ ಬಾಲಕೃಷ್ಣ, ಪ್ರತಿಭಾಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇವರಿಬ್ಬರು ಶನಿವಾರ ಶ್ರೀನಿವಾಸ್‍ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೇಳೆ ಗಲಾಟೆ ನಡೆದಿದೆ. ನಂತರ ಮಾತುಕತೆಗೆಂದು ಶ್ರೀನಿವಾಸ್‍ರನ್ನ ಬಸ್ ಡಿಪೋ ಬಳಿ ಕರೆಸಿಕೊಂಡ ಬಾಲಕೃಷ್ಣ ಹಾಗೂ ಪ್ರತಿಭಾ, ಇಬ್ಬರೂ ಸೇರಿನನ್ನ ಚಾಕುವಿನಿಂದ ಇರಿದು ಶ್ರೀನಿವಾಸ್‍ರನ್ನ ಕೊಲೆ ಮಾಡಿದ್ದಾರೆ. ನಂತರ ವಾಹನದಲ್ಲಿ ಶವವನ್ನ ಸಾಗಾಸಿ ಬೊಮ್ಮಸಂದ್ರ ಕೆರೆಯಲ್ಲಿ ಎಸೆದಿದ್ದಾರೆ. ಸದ್ಯ ಶವಕ್ಕಾಗಿ ಸ್ಥಳದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು