Tuesday, April 28, 2026
ಸುದ್ದಿ

ಒಂದೇ ದಿನದಲ್ಲಿ ಬೆಸ್ಕಾಂಗೆ 11,180 ದೂರು – ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ಕರೆಂಟ್ ಇಲ್ಲದೆ ಇದ್ದರೆ ಮನುಷ್ಯ ಸ್ವಲ್ಪ ಹೊತ್ತು ಕಳೆಯೋದು ಕಷ್ಟವಾಗಿ ಹೋಗಿದೆ. ಹತ್ತಾರು ಬಾರಿ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವುದು ಇದೆ.

ಸೋಮವಾರ ಬೆಂಗಳೂರು ನಗರದಲ್ಲಿ ಸುರಿದ ಮಳೆಯಿಂದಾಗಿ ಪವರ್ ಕಟ್ ಆಗಿದ್ದು ಒಂದೇ ದಿನದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಬೆಸ್ಕಾಂಗೆ 11,180 ದೂರುಗಳು ಬಂದಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಯನಗರ, ಶಾಂತಿನಗರ, ಎಸ್‌ಆರ್‌ನಗರ, ವಿಲ್ಸನ್ ಗಾರ್ಡನ್, ಎಸ್‍ಜಿ ಪಾಳ್ಯ, ಬಿಟಿಎಂ ಲೇಔಟ್, ದೊಮ್ಮಲೂರು, ಮಾರತ್ತಹಳ್ಳಿ, ಆಸ್ಟಿನ್ ಟೌನ್, ಇಂದಿರಾನಗರ, ಭಾರತಿನಗರ, ಕೋರಮಂಗಲ, ಮುರುಗೇಶಪಾಳ್ಯ, ಹೊಸಕೋಟೆ, ರಾಮಮೂರ್ತಿ ನಗರ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು.

ಸೋಮವಾರ ಸುರಿದ ಮಳೆಯಿಂದಾಗಿ ನಗರದ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಪರದಾಡುವಂತಾಯಿತು. ವಿದ್ಯುತ್ ಸಮಸ್ಯೆಯಿಂದ ಬೇಗ ಪರಿಹಾರ ನೀಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳು ಭರವಸೆಯೇನೋ ನೀಡಿದ್ದಾರೆ ಆದರೆ ಅದು ಎಷ್ಟರ ಮಟ್ಟಿಗೆ ಸರಿಯಾಗಲಿದೆ ಎಂದು ಕಾದು ನೋಡಬೇಕಿದೆ.