Saturday, June 20, 2026
ಸುದ್ದಿ

ಐಸಿಸ್ ಪಟ್ಟಿಯಲ್ಲಿ ಕೇರಳದ ಮೂವರ ಹೆಸರು..! – ಕಹಳೆ ನ್ಯೂಸ್

ಮಂಗಳೂರು: ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಗಳು ಕೇರಳವನ್ನು ಭೂತದಂತೆ ಕಾಡುತ್ತಿರೋದು ವಿಶ್ವಕ್ಕೆ ತಿಳಿದಿರುವಂತದ್ದು. ಹಾಗಾಗಿ ಕೇರಳದ ಮತ್ತೆ ಮೂವರು ಇದೀಗ ಐಸಿಸ್ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳು ಎಂದು ಗುರುತಿಸಲ್ಪಟ್ಟಿದ್ದಾರೆ. ಕೇರಳದ ಕಾಸರಗೋಡಿನ ಇಬ್ಬರು ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.

ಜಾಹೀರಾತು
ಜಾಹೀರಾತು

ಈ ಕುರಿತು ಎನ್‍ಐಎ ತಂಡ ತನಿಖೆ ಆರಂಭಿಸಿದ್ದು, ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಭಾರತದಲ್ಲಿ ಐಸಿಸ್ ಚಟುವಟಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಈ ವಿಚಾರವಾಗಿ ಇದೀಗ ದೇಶದ ಎಲ್ಲೆಡೆ ಐಸಿಸ್ ಸಮರ್ಥಕರ ಮೇಲೆ ನಿಗಾ ಇಡಲಾಗಿದೆ. ಕಾಸರಗೋಡು ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್, ಅಹಮ್ಮದ್ ಅರಾಫತ್, ಕೊಲ್ಲಂ ಕರುನಾಗಪಳ್ಳಿ ನಿವಾಸಿ ಮೊಹಮ್ಮದ್ ಫೈಜಲ್‍ನನ್ನು ಹೊಸದಾಗಿ ಆರೋಪಿಗಳ ಪಟ್ಟಿಗೆ ಸೇರಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಎರ್ನಾಕುಳಂ ನಲ್ಲಿರುವ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು