Tuesday, April 28, 2026
ಸುದ್ದಿ

ಸೈನಿಕನಿಂದ ಬಾಲಕಿಯ ಅತ್ಯಾಚಾರ – ಕಹಳೆ ನ್ಯೂಸ್

ಸಕಲೇಶಪುರ : ದೇಶದ ಗಡಿಯಲ್ಲಿ ನಿಂತು ದೇಶವನ್ನ ರಕ್ಷಣೆ ಮಾಡುವ ವೀರ ಯೋಧರ ನಡುವೆ ಇಲ್ಲೊಬ್ಬ ಸೈನಿಕ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಇದೀಗ ಸೈನಿಕ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೋರ್ವ ಆರೋಪಿಯ ಬಂಧನಕ್ಕಾಗಿ ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

ಬಂಧಿತನನ್ನು ಸೈನಿಕ ಕಾರ್ತಿಕ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಬಾಳ್ಳುಪೇಟೆಯ ಸಂದೀಪ್ ನಾಪತ್ತೆಯಾಗಿದ್ದು, ಇವರಿಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಏ.23ರಂದು ಬಾಳ್ಳುಪೇಟೆಗೆ ಬಾಲಕಿ ತಮ್ಮ ಪರಿಚಯಸ್ಥರ ಮನೆಯ ಮಗುವಿನ ಹುಟ್ಟು ಹಬ್ಬಕ್ಕೆ ತೆರಳಿದ್ದಾಳೆ. ಏ.25ರಂದು ಗುರುವಾರ ತಮ್ಮ ಮನೆಗೆ ಮಗುವಿನೊಂದಿಗೆ ವಾಪಾಸ್ಸಾಗಿದ್ದಾಳೆ. ಏ.26ರಂದು ಮಗುವನ್ನು ವಾಪಾಸ್ ಕಳುಹಿಸಲು ಬಾಳ್ಳುಪೇಟೆಗೆ ಹೋಗಿದ್ದಾಳೆ.

ಈ ವೇಳೆ ಪರಿಚಯಸ್ಥನಾದ ಸಂದೀಪ್ ಕಾರಿನಲ್ಲಿ ಬಂದು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಲಕಿಗೆ ಅಮಲು ಪದಾರ್ಥ ಕೊಟ್ಟಿದ್ದಾನೆ. ನಂತರ ಮಗುವನ್ನು ಖುದ್ದಾಗಿ ಹೋಗಿ ಸಂದೀಪ್ ಕಳುಹಿಸಿ ಹೋಗಿದ್ದಾನೆ. ಬಾಲಕಿಯ ಬಗ್ಗೆ ಮಗುವಿನ ಮನೆಯವರು ಪ್ರಶ್ನಿಸಿದಾಗ ಆಕೆ ಅಲ್ಲಿಂದಲೇ ವಾಪಾಸ್ ಆಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಪ್ರಜ್ಞೆ ಕಳೆದುಕೊಂಡು ಕಾರಿನಲ್ಲೇ ಇದ್ದ ಬಾಲಕಿಯನ್ನು ಸಂದೀಪ್ ಮತ್ತು ಕಾರ್ತಿಕ್ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ಬೆಳಗ್ಗಿನವರೆಗೂ ಅತ್ಯಾಚಾರ ಎಸಗಿ ಶನಿವಾರ ಮತ್ತೇ ಮನೆಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಮನೆಯವರು ಬಾಲಕಿಯ ಸ್ಥಿತಿಯನ್ನು ಕಂಡು ದೇಹವನ್ನು ಪರಿಶೀಲಿಸಿದಾಗ ಗುಪ್ತಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿರುವುದು ಕಂಡು ಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು ಒಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ.