
ಹೊಸದಿಲ್ಲಿ: ಇಂದಿನಿಂದ ದೇಶದಾದ್ಯಂತ ಅಡುಗೆ ಅನಿಲ ದರ ಹೆಚ್ಚಳವಾಗಿದೆ. ಸಬ್ಸಿಡಿ ಬೆಲೆಯ 14.2 ಕಿಲೋಗ್ರಾಮ್ ಸಿಲಿಂಡರ್‌ಗೆ 0.28 ರೂಪಾಯಿ ಹೆಚ್ಚಳವಾಗಿದೆ. ಇದು ದಿಲ್ಲಿಯ ಲೆಕ್ಕವಾದರೆ ಮುಂಬೈಯಲ್ಲಿ 0.29 ರೂಪಾಯಿ ಬೆಲೆ ಹೆಚ್ಚಳವಾಗಿದೆ. ಮೆಟ್ರೋ ದಿಲ್ಲಿಯಲ್ಲಿ 14,2 ಕಿಲೊಗ್ರಾಂ ಸಿಲಿಂಡರ್‌ಗೆ 496.14ರೂ., ಕೊಲ್ಕತಾದಲ್ಲಿ 499.29 ರೂ., ಮುಂಬೈಯಲ್ಲಿ 493.86 ರೂ., ಚೆನೈನಲ್ಲಿ 484.02ರೂ. ಆಗಿದ್ದು, ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್‌ಗೆ ಉಭಯ ನಗರಗಳಲ್ಲಿ 6 ರೂ. ಹೆಚ್ಚಳವಾಗಿದೆ. ದಿಲ್ಲಿಯಲ್ಲಿ 712.50 ರೂ., ಕೊಲ್ಕತಾದಲ್ಲಿ 738.50 ರೂ., ಮುಂಬೈಯಲ್ಲಿ 684.50 ರೂ. ಚೆನ್ನೈಯಲ್ಲಿ 728 ರೂ. ದರವಾಗಿದೆ. ಈ ವರ್ಷ ಈವರೆಗೆ ಸಬ್ಸಿಡಿ ರಹಿತ ಸಿಲಿಂಡರ್ ಗೆ 96-98.5 ರೂ.ವರೆಗೆ ದರ ಕಡಿತವಾಗಿತ್ತು.









