Recent Posts

Sunday, April 26, 2026
ಸುದ್ದಿ

ಭಾರತೀಯ ವಾಯುಪಡೆ ದಾಳಿ ನಡೆಸಿದ್ದು ಶ್ಲಾಘನೀಯ: ವೀರಪ್ಪ ಮೊಯ್ಲಿ – ಕಹಳೆ ನ್ಯೂಸ್

ಮಂಗಳೂರು: ಉಗ್ರರಿಗೆ ಬೆಂಬಲ ನೀಡುತ್ತಾ ಬರುತ್ತಿದ್ದ ಪಾಕ್ ನೆಲದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು ಶ್ಲಾಘನೀಯ. ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಾಯುಸೇನೆಯು ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಸ್ವಾಗತಾರ್ಹ. ಈ ದಾಳಿಯ ಬಳಿಕ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗಡಿಭಾಗದಲ್ಲಿ ಇನ್ನಷ್ಟು ಭದ್ರತೆಯಿಂದ ಕಣ್ಗಾವಲು ಕಾಯಬೇಕಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ವಿಚಾರವಂತ ರಾಷ್ಟ್ರ. ಯಾವುದೇ ವಿಚಾರದ ಆಳ- ಅಗಲವನ್ನು ಯೋಚಿಸದೆ ಹಾಗೂ ಅದರ ಫಲಾಫಲದ ಕುರಿತು ಚಿಂತಿಸದೆ ಮುಂದಿನ ಕೆಲಸ ಮಾಡುವುದಿಲ್ಲ. ಆದರೆ, ಪಾಕಿಸ್ತಾನ ಅಂತಹ ಪ್ರಬುದ್ಧ ನಡೆ ಪ್ರದರ್ಶಿಸುವುದಿಲ್ಲ.

ಅದೊಂದು ಹತಾಶೆಯಲ್ಲಿ ಮುಳುಗಿದ್ದು ತನ್ನ ಮಡಿಲಲ್ಲಿ ಉಗ್ರರನ್ನು ಪೋಷಿಸುತ್ತಿದೆ. ಯಾವುದೇ ಸೈನಿಕ ಕಾರ್ಯಾಚರಣೆಯಲ್ಲಿ ರಾಜಕೀಯ ಮಾಡುವುದಿಲ್ಲ. ಶತ್ರುಗಳನ್ನು ಸದೆ ಬಡಿದಿರುವುದಕ್ಕೆ ಸೈನ್ಯಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.