Recent Posts

Saturday, April 25, 2026
ಸುದ್ದಿ

ಪುಲ್ವಾಮಾ ಪ್ರತಿಕಾರ: ಉಗ್ರರನ್ನು ಚಿಂದಿ ಉಡಾಯಿಸಿದ ಭಾರತೀಯ ವಾಯುಸೇನೆ – ಕಹಳೆ ನ್ಯೂಸ್

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಇಡೀ ಭಾರತವೇ ಕೆಂಡಮಂಡಲವಾಗಿತ್ತು. ಕೆಚ್ಚೆದೆಯ ವೀರ ಯೋದರು ಉಗ್ರರ ರುಂಡವನ್ನ ಚೆಂಡಾಡಲು ಕಾಯುತ್ತಿದ್ದರು. ಇದೀಗ ಭಾರತೀಯ ಸೇನೆ ವೀರ ಹೆಜ್ಜೆ ಇಟ್ಟು ಪ್ರತಿಕಾರವನ್ನ ಪಡೆದುಕೊಂಡಿದೆ.

ಭಾರತೀಯ ವಾಯುಸೇನೆಯು ಭಯೋತ್ಪಾದಕ ನೆಲೆಯ ಮೇಲೆ 1000 ಕೆಜಿ ಬಾಂಬ್ ಅನ್ನು ಎಸೆದಿದ್ದು, ಉಗ್ರರನ್ನು ಚಿಂದಿ ಉಡಾಯಿಸಿ ಬಿಟ್ಟಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ನಾಲ್ಕು ಕಡೆ ದಾಳಿ ನಡೆದಿದ್ದು, ದಾಳಿಯಲ್ಲಿ ಸುಮಾರು 200-300 ಉಗ್ರರನ್ನು ಹತ್ಯೆಗೈಯ್ಯಲಾಗಿರಬಹುದು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉಗ್ರರು ತಂಗಿದ್ದ ಸುಮಾರು 500 ಮೀ.ನಷ್ಟು ಜಾಗ ಸರ್ವನಾಶ ಮಾಡಿದ ಭಾರತೀಯ ಸೇನೆ ಬೆಳಿಗ್ಗೆ 3:30 ಕ್ಕೆ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ. ಬೆಳಗಿನ ಜಾವ ನಡೆದ ದಾಳಿಯಿಂದಾಗಿ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.