Recent Posts

Monday, June 8, 2026
ಸುದ್ದಿ

ಸ್ವಾಮಿ ಕೊರಗಜ್ಜನ ವೆಕ್ಟರ್ ಆರ್ಟ್ ವೈರಲ್ – ಕಹಳೆ ನ್ಯೂಸ್

ಮಂಗಳೂರು: ತುಳುನಾಡಿನಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯ ಅವಿಭಾಜ್ಯ ಅಂಗ. ಈ ನಡುವೆ ತುಳುನಾಡಿನ ದೈವಗಳಿಗೂ ತಂತ್ರಜ್ಞಾನದ ಟಚ್ ನೀಡಲಾಗುತ್ತಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಇದೀಗ ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್ ಆರ್ಟ್ ಭಾರೀ ಪ್ರಸಿದ್ದಿ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೆಕ್ಟರ್ ಆರ್ಟ್‍ನಲ್ಲಿ ಮೂಡಿ ಬಂದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆ ವೈರಲ್ ಆಗಿದೆ. ಅಂದಹಾಗೆ ಕೊರಗಜ್ಜನ ವೆಕ್ಟರ್ ಆರ್ಟ್ ಚಿತ್ರವನ್ನು ಬಿಡಿಸಿರುವವರು ಮಂಗಳೂರು ಎಸ್.ಜೆ. ಶಶಾಂಕ್ ಆಚಾರ್ಯ. ಇವರು ಬಿಡಿಸಿದ ವೆಕ್ಟರ್ ಚಿತ್ರ ಭಾರೀ ವೈರಲ್ ಆಗುತ್ತಿದೆ.