Wednesday, June 17, 2026
ಸುದ್ದಿ

ಭೀಕರ ಅಪಘಾತ: ಬೈಕ್ ಟ್ಯಾಂಕರ್‌ಗೆ ಬೆಂಕಿ, ಸುಟ್ಟು ಕರಕಲಾದ ಸವಾರ – ಕಹಳೆ ನ್ಯೂಸ್

ಖಾಸಗಿ ಬಸ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಬೆಂಕಿ ಹತ್ತಿಕೊಂಡು ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿ ಸಾವನ್ನಪ್ಪಿದ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ.

ಜಾಹೀರಾತು

ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದಲ್ಲಿ ಅಪಘಾತದ ಸಂಭವಿಸಿದೆ. ನೀರಜ್ ಹಾಗೂ ಅವರ ಸ್ನೇಹಿತ ಬೈಕ್‌ನಲ್ಲಿ ಮುಂಜಾನೆ ತೆರಳುತ್ತಿದ್ದ ವೇಳೆ ಮುಂದಿನಿಂದ ಬಂದ ಖಾಸಗಿ ಬಸ್‌ಗೆ ಬೈಕ್ ಢಿಕ್ಕಿ ಹೊಡೆದಿದೆ, ಇದರಿಂದಾಗಿ ಬೈಕ್ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡು ಬೈಕ್ ಸವಾರ ನೀರಜ್ ಸ್ಥಳದಲ್ಲೇ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕ್‌ನಲ್ಲಿದ್ದ ಇನ್ನೋರ್ವ ಯುವಕ ಮಾತ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.