Recent Posts

Tuesday, May 5, 2026
ಸುದ್ದಿ

ಆರೋಗ್ಯ ಇಲಾಖೆಯ ಕೆಲಸವನ್ನು ಖಾಯಂಗೊಳಿಸಲು ನೌಕರನಿಂದ ಪ್ರತಿಭಟನೆ – ಕಹಳೆ ನ್ಯೂಸ್

ಸುಳ್ಯ: ಆರೋಗ್ಯ ಇಲಾಖೆಯಲ್ಲಿನ ಕೆಲಸವನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಇಲಾಖೆಯ ನೌಕರರೊಬ್ಬರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮಾಡಿದ ಘಟನೆ ನಡೆದಿದೆ.

ಸುಳ್ಯ ಸರಕಾರಿ ಆಸ್ಪತ್ರೆಯ ಅಡುಗೆಯವರಾದ ಹೆಚ್ ವೆಂಕಟ್ರಮಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಮುಷ್ಕರ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಕೆಲಸವನ್ನು ಖಾಯಂ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿ ನಾಲ್ಕೂವರೆ ವರ್ಷ ಕಳೆದರೂ ಅದನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದರು.

ಪ್ರತಿಭಟನೆ ನಡೆಸಿದ ಕೇವಲ ಒಂದು ಗಂಟೆಯಲ್ಲಿ ಜೆಡಿಎಸ್ ಜಿಲ್ಲಾ ಮುಖಂಡ ಎಂ ಬಿ ಸದಾಶಿವ ಜಿಲ್ಲಾಧಿಕಾರಿ ಕಚೇರಿ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಕಾತ್ಯಾಯಿನಿ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

ಈ ಸಂಭಾಷಣೆಯ ಫಲವಾಗಿ ವೆಂಕಟ್ರಮಣ ಅವರ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವಂತೆ ಮಾಡಿದ್ದಾರೆ.