Friday, November 27, 2026
ಸುದ್ದಿ

ಸುಳ್ಯ: ಗಾಳಿ ಮಳೆಗೆ ಬೃಹತ್‌ ಗಾತ್ರದ ಮರ ಬಿದ್ದು ಮನೆ ಧ್ವಂಸ : ಮನೆಮಂದಿಗೆ ಗಂಭೀರ ಗಾಯ – ಕಹಳೆನ್ಯೂಸ್

ಸುಳ್ಯ : ಆಲೆಟ್ಟಿ ಗ್ರಾಮದ ಚಳ್ಳಂಗಾರು ಎಂಬಲ್ಲಿ ನ.25 ರ ರಾತ್ರಿ ಸುರಿದ ವಿಪರೀತ ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮವಾಗಿ ಮನೆ ಸಂಪೂರ್ಣವಾಗಿ ಧ್ವಂಸಗೊಂಡು ಮನೆಯಲ್ಲಿದ್ದರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಚಳ್ಳಂಗಾರು ಪ್ರದೇಶದಲ್ಲಿ ವಾಸವಾಗಿರುವ ದೇವಿದಾಸ ಎಂಬವರ ಮನೆಗೆ ರಾತ್ರಿ ಸರಿಸುಮಾರು 9.30 ರ ಆಸುಪಾಸಿನಲ್ಲಿ ಮನೆಯ ಎಡಭಾಗದಲ್ಲಿದ್ದ ಬೃಹತ್ ಗಾತ್ರದ ಶಾಂತಿ ಮರವೊಂದು ಇದ್ದಕ್ಕಿದ್ದಂತೆ ಧರಶಾಹಿಯಾಯಿತು. ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗೆ ದೇವಿದಾಸರು ಮತ್ತು ಅವರ ಪತ್ನಿ ಪೂರ್ಣಿಮಾ, ತಾಯಿ ಕುಸುಮಾವತಿ, ತಂಗಿ ಅನಿತಾ, ಮಗಳು ಸುಶ್ಮಿತಾ ಮತ್ತು ಆಕೆಯ ಒಂದು ವರ್ಷದ ಗಂಡು ಮಗು ಮಲಗಿರುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ಜಾಹೀರಾತು

ವಿಪರೀತ ಮಳೆ ಸುರಿಯುತ್ತಿದ್ದರಿಂದ ಪಕ್ಕದ ಮನೆಯವರಿಗೆ ಶಬ್ದ ಕೇಳಿಸಿಲ್ಲವೆಂದು ಹೇಳುತ್ತಾರೆ ಘಟನೆ ನಡೆದ ಕೂಡಲೇ ದೇವಿದಾಸರು ನೆರೆಯ ಮನೆಯವರಾದ ಕಾರ್ತಿಕ್ ರವರಲ್ಲಿಗೆ ಮತ್ತು ಪಕ್ಕದಲ್ಲಿ ವಾಸವಿರುವ ಬಾಬು, ವಿಶ್ವನಾಥ, ದರ್ಶನ್ ರವರ ಮನೆಗೆ ಓಡಿ ಹೋಗಿ ಘಟನೆಯ ಬಗ್ಗೆ ತಿಳಿಸಿದರು. ತಕ್ಷಣ ಧಾವಿಸಿ ಬಂದ ಅವರು ಮನೆಯ ಒಳಗಿದ್ದ ಮಗು ಸಮೇತ ಎಲ್ಲರನ್ನೂ ಹೊರಗೆ ತೆರೆಯುವಲ್ಲಿ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಕಾರ್ತಿಕ್ ರವರ ಕಾರಿನಲ್ಲಿ ಗಾಯಗೊಂಡ ಅವರನ್ನು ತಕ್ಷಣ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೇವಿದಾಸ ರ ಪುತ್ರಿ ಸುಶ್ಮಿತಾ ರಿಗೆ ಭುಜ ಮತ್ತು ಎದೆಯ ಭಾಗಕ್ಕೆ ಗಂಭೀರ
ಗಾಯವಾಗಿದ್ದರಿಂದ ಆಕೆಯನ್ನು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಉಳಿದವರಿಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಿದಾಸರ ಓರ್ವ ಪುತ್ರ ವಿಶ್ಲೇಶ್ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಮತ್ತೋರ್ವ ಯಕ್ಷಿತ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತುಅರಣ್ಯ ಇಲಾಖೆಯವರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.