Friday, November 27, 2026
ಸುದ್ದಿ

ಭಾರೀ ಮಳೆಯಲ್ಲೂ ಶಬರಿಮಲೆಯಲ್ಲಿ ಭಕ್ತ ಸಾಗರ- 53 ಸಾವಿರಕ್ಕೂ ಹೆಚ್ಚು ಮಂದಿ ದರ್ಶನ – ಕಹಳೆನ್ಯೂಸ್

ಶಬರಿಮಲೆ : ಮಂಡಲಕಾಲ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಸಂಜೆ ಸನ್ನಿಧಾನದಲ್ಲಿ ಭಾರೀ ಮಳೆ ಸುರಿದಿದೆ.ಧಾರಾಕಾರ ಮಳೆಯ ನಡುವೆಯೂ ಅಯ್ಯಪ್ಪ ಭಕ್ತರ ದರ್ಶನದ ಉತ್ಸಾಹಕ್ಕೆ ಯಾವುದೇ ಕುಂದು ಉಂಟಾಗಿಲ್ಲ. ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಇರುಮುಡಿಕಟ್ಟಿನೊಂದಿಗೆ ಸನ್ನಿಧಾನಕ್ಕೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದರು.

ಜಾಹೀರಾತು

ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಭಾರೀ ಮಳೆಯ ನಡುವೆಯೂ ದೊಡ್ಡ ನಡಪ್ಪಂತಲ್ ಹಾಗೂ ಹದಿನೆಂಟನೇ ಮೆಟ್ಟಿಲಿನ ಕೆಳಭಾಗದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಸಂಜೆ 4 ಗಂಟೆಯ ವೇಳೆಗೆ 53,331ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸನ್ನಿಧಾನಕ್ಕೆ ಆಗಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹದಿನೆಂಟನೇ ಮೆಟ್ಟಿಲಿನ ಮೇಲ್ಭಾಗದಲ್ಲಿ ಮೇಲ್ಛಾವಣಿ ಇರುವುದರಿಂದ ಮೆಟ್ಟಿಲು ಹತ್ತುವ ಭಕ್ತರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಆದರೆ ಧ್ವಜಸ್ತಂಭದ ಸುತ್ತಮುತ್ತ ಹಾಗೂ ಸನ್ನಿಧಾನದ ಆವರಣದಲ್ಲಿ ಮಳೆಯಲ್ಲಿ ನೆನೆಯುತ್ತಲೇ ಭಕ್ತರು ಸಾಗಬೇಕಾಯಿತು.

ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ಭಾರೀ ಮಳೆಯ ಹಿನ್ನೆಲೆಯಲ್ಲಿ ಪಂಪಾದಿಂದ ಬೆಟ್ಟ ಹತ್ತುವ ಹಾಗೂ ಅರಣ್ಯ ಮಾರ್ಗದಲ್ಲಿ ಸಂಚರಿಸುವ ಯಾತ್ರಾರ್ಥಿಗಳು ಜಾರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.