ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಸುರಕ್ಷತೆಯನ್ನು ಹೆಚ್ಚಿಸುವ ಸೇಫ್ಟಿ ಬೇಸಿಕ್ ಸ್ಟ್ರಿಪ್ ನಿರ್ಮಾಣ ಯೋಜನೆ ಮತ್ತಷ್ಟು ವಿಳಂಬವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪ್ರಕ್ರಿಯೆ ವಿಳಂಬದಿಂದ ಯೋಜನೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಸುರಕ್ಷತೆಗಾಗಿ ರನ್ವೇಯ ಎರಡೂ ಬದಿಗಳಲ್ಲಿ 160 ಮೀಟರ್ ಅಗಲದ ಸುರಕ್ಷತಾ ಪ್ರದೇಶ ಅಗತ್ಯವಿದೆ. ಒಂದು ಬದಿಯಲ್ಲಿ ಈಗಾಗಲೇ ವ್ಯವಸ್ಥೆಯಿದ್ದು, ಇನ್ನೊಂದು ಬದಿಯಲ್ಲಿ ಸೇಫ್ಟಿ ಬೇಸಿಕ್ ಸ್ಟ್ರಿಪ್ ನಿರ್ಮಾಣ ಬಾಕಿ ಇದೆ.
ರನ್ವೇ ಎಂಡ್ ಸೇಫ್ಟಿ ಏರಿಯಾ (RESA) ಈಗಾಗಲೇ ನಿರ್ಮಾಣಗೊಂಡಿದೆ. ಈ ಯೋಜನೆಗೆ ಕೊಳಂಬೆ ಮತ್ತು ಅದ್ಯಪಾಡಿ ಪ್ರದೇಶಗಳಲ್ಲಿ 32.97 ಎಕರೆ ಭೂಮಿ ಅಗತ್ಯವಿದೆ. 2015-16ರಿಂದಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ 1ರಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಭೂಸ್ವಾಧೀನಕ್ಕೆ ಅನುಮೋದನೆ ನೀಡಿತ್ತು. ಭೂಸ್ವಾಧೀನ ವೆಚ್ಚವನ್ನು ಭರಿಸಲು ಅದಾನಿ ಏರ್ಪೋರ್ಟ್ಸ್ ಸಂಸ್ಥೆಯೂ ಒಪ್ಪಿಗೆ ಸೂಚಿಸಿತ್ತು. ಆದರೆ, ಹಣವನ್ನು ನೇರವಾಗಿ ಜಿಲ್ಲಾಡಳಿತಕ್ಕೆ ನೀಡಲು ಸಾಧ್ಯವಿಲ್ಲದ ಕಾರಣ ಸರ್ಕಾರದ ಮೂಲಕ ಹಸ್ತಾಂತರಿಸುವ ಪ್ರಕ್ರಿಯೆಯಿಂದ ವಿಳಂಬವಾಗಿದೆ.