Wednesday, October 21, 2026
ಸುದ್ದಿ

ಪುತ್ತೂರಿನ ಬೊಳುವಾರಿನಲ್ಲಿರುವ ಇತಿಹಾಸ ಪ್ರಸಿದ್ದ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ 87ನೇ ವರ್ಷದ ನವರಾತ್ರಿ ಉತ್ಸವ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಬೊಳುವಾರಿನಲ್ಲಿರುವ ಇತಿಹಾಸ ಪ್ರಸಿದ್ದ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ 87ನೇ ವರ್ಷದ ನವರಾತ್ರಿ ಉತ್ಸವ ಉತ್ಸವವು ಅ.19ರಂದು ಶ್ರೀ ದೇವಿಯ ವೈಭವದ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.
ಸಂಜೆ ಸುಬ್ರಹ್ಮಣ್ಯ ನಗರದಲ್ಲಿ ಹುಲಿ ವೇಷ ಕುಣಿತ ಮತ್ತು ತಾಲೀಮು ಪ್ರದರ್ಶನ ನಡೆಯಿತು. ರಾತ್ರಿ ಸಂಪ್ರದಾಯದಂತೆ ಉರ್ಲಾಂಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಮತ್ತು ಶ್ರೀ ಸರಸ್ವತೀ ಭಜನಾ ಮಂಡಳಿಯವರ ನೆರವಿನೊಂದಿಗೆ ಆಂಜನೇಯ ಮಂತ್ರಾಲಯಕ್ಕೆ ಭಜನೆಯ ಮೂಲಕ ಉಲ್ಪೆಯನ್ನು ತಂದ ಬಳಿಕ ರಾತ್ರಿ ಮಂತ್ರಾಲಯದಿಂದ ವೈಭವದ ಶ್ರೀ ದೇವಿಯ ಮೆರವಣಿಗೆ ನಡೆಯಿತು.
ಮೆರವಣಿಗೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರಿನ ಶಾರದಾ ಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ, ಪೂಜೆ ಮಾಡಿ ಬಳಿಕ ಶ್ರೀ ವೆಂಕಟ್ರಮಣ ದೇವಸ್ಥಾನ, ಮಾರ್ಕೆಟ್ ರಸ್ತೆಯಾಗಿ ಪುನಃ ಮಂತ್ರಾಲಯಕ್ಕೆ ಬಂದು ಶ್ರೀ ಮಹಾಶಕ್ತಿ ಪೂಜೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತು.ಇದೆ ಸಂದರ್ಭದಲ್ಲಿ ಮಣಿಯಾಣಿ ಸಹೋದರರಾದ ಪ್ರವೀಣ್ ಕುಮಾರ್ ಬೋಲ್ವಾರ್, ನಿಲoತಾ ಕುಮಾರ್ ಬೋಲ್ವಾರ್, ಕುಟುಂಬಸ್ಥರು, ಭಕ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು