Wednesday, October 21, 2026
ಸುದ್ದಿ

ಪುತ್ತೂರು ನೆಲಪ್ಪಾಲು ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ನವೆಂಬರ್ 26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಗಣ್ಯರ ಸಮ್ಮುಖದಲ್ಲಿ ನೆರವೇರಿತು.

ಜಾಹೀರಾತು

ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಹಿತದೃಷ್ಟಿಯಿಂದ ಆಯೋಜಿಸಲಾಗಿರುವ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮವು ನವೆಂಬರ್ 26ರ ಗುರುವಾರದಿಂದ ನವೆಂಬರ್ 29ರ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಂಗವಾಗಿ ಪಂಚಮುಖಿ ಆಂಜನೇಯ ಹವನ ಹಾಗೂ ಕಲಶ ಸಂಗಮ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ರಾಮಾಯಣ ಪ್ರವಚನ, ಸಂವಾದ ಹಾಗೂ ಭಜನಾ ಸಂಕೀರ್ತನೆ ಕಾರ್ಯಕ್ರಮಗಳು ಜರುಗಲಿವೆ.

ಈ ಹಿನ್ನೆಲೆಯಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಯು. ಪೂವಪ್ಪ ಕಲ್ಲಾರೆ, ಮುರಳಿಕೃಷ್ಣ ಹಸಂತಡ್ಕ, ಪುನೀತ್ ಅತ್ತಾವರ, ಜೀವನಂದರ್ ಜೈನ್, ಮಹೇಶ್ ಕಜೆ, ಸುರೇಶ್ ಪುತ್ತೂರಾಯ, ಜಯಂತ ಕಂಬಳತಡ್ಡ ಹಾಗೂ ದಯಾನಂದ ಶೆಟ್ಟಿ ಉಜಿರೆಮಾರ್, ಮಾಧವ ಪೂಜಾರಿ , ಡಾ ಕೃಷ್ಣ ಪ್ರಸನ್ನ, ಧಾಮೋಧರ ಪಾಟಳಿ, ಉಪಸ್ಥಿತರಿದ್ದರು.ಇದಲ್ಲದೆ, ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.