
ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು.
ಸರಕಾರಿ ಪದವಿ ಕಾಲೇಜು ಸುಳ್ಯ ಇಲ್ಲಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮೋನಿಷಾ ಕೆ, ದೀಪ ಬೆಳಗಿ, ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಕಾಮನ ಬಿಲ್ಲಿನ ಬಣ್ಣಗಳನ್ನು ಉತ್ಪಾದಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ “ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆ” ವಿಷಯದ ಕುರಿತಾಗಿ ಬಹಳ ಉತ್ತಮವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ವಹಿಸಿ, ಮಾತನಾಡಿ ವಿಜ್ಞಾನ ಸಂಘದ ಮುಂದಿನ ಚಟುವಟಿಕೆಗಳಿಗೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕಿ ಡಾ. ಮಮತಾ ಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಧರ್ ವಿ, ವಿಜ್ಞಾನ ಸಂಘದ ಸಂಯೋಜಕಿ ಅಶ್ವಿನಿ ಕೆ ಸಿ ಉಪಸ್ಥಿತರಿದ್ದರು.
ವಿಜ್ಞಾನ ಸಂಘದ ಸದಸ್ಯರಾದ ಕು. ಪ್ರಾರ್ಥನ ಪ್ರಾರ್ಥಿಸಿ, ವಿಜ್ಞಾನ ಸಂಘದ ಅಧ್ಯಕ್ಷೆ ಕು. ಕವನ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಸತ್ಯಪ್ರಕಾಶ್ ದೇರಪ್ಪಜ್ಜನಮನೆ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನ ಸಂಘದ ಖಜಾಂಜಿ ದೇಶಿತಾ ಎಚ್ ಆರ್ ಉದ್ಘಾಟಕರನ್ನು ಪರಿಚಯಿಸಿ, ಕಾರ್ಯದರ್ಶಿ ವರಧ ಟಿ ಜಿ ವಂದಿಸಿದರು. ಅಂತಿಮ ಬಿ.ಎಸ್ಸಿಯ ಅಭಿಷೇಕ್ ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರಾದ ಕುಲದೀಪ್, ಅಶ್ವಿನಿ, ಕೃತಿಕಾ, ಜಿತೇಶ್, ಹರ್ಷಿತಾ, ಭಾವನಾ, ಅಕ್ಷತಾ ಮತ್ತು ಶನ್ವಿತಾ ಹಾಗೂ ಸಿಬ್ಬಂದಿಗಳಾದ ಜಯಂತಿ, ಸೌಮ್ಯ, ಗೀತಾ, ಭವ್ಯ ಮತ್ತು ಶಿವಾನಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಹಕರಿಸಿದರು.











