Wednesday, October 14, 2026
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ  ಅಧ್ಯಯನ ಕೇಂದ್ರ ಹಾಗೂ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ  ಕಲ್ಲಡ್ಕ ಇವರ ಸಹಯೋಗದಲ್ಲಿ ವಿವೇಕ ಚಿಂತನೆ ಮತ್ತು ಇಂದಿನ ಯುವಶಕ್ತಿ  ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ  ಅಧ್ಯಯನ ಕೇಂದ್ರ ಹಾಗೂ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ  ಕಲ್ಲಡ್ಕ ಇವರ ಸಹಯೋಗದಲ್ಲಿ ಇಲ್ಲಿನ ಕನ್ನಡ ವಿಭಾಗದ ಸಹಕಾರದಲ್ಲಿ  ದಿನಾಂಕ 12/10/2026ರಂದು ಶ್ರೀರಾಮ ಕಾಲೇಜಿನ ಸಾಧನಾ ಸಭಾಂಗಣದಲ್ಲಿ   ವಿವೇಕವಾಣಿ ಸರಣಿಯ 59ನೇ ಉಪನ್ಯಾಸ ಕಾರ್ಯಕ್ರಮ &ವಿವೇಕ ಚಿಂತನೆ  ಮತ್ತು ಇಂದಿನ ಯುವಶಕ್ತಿ&quoಣ; ಎಂಬ ವಿಷಯದ ಕುರಿತು ಉಪನ್ಯಾಸ  ನಡೆಯಿತು.

ಜಾಹೀರಾತು

ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಕಲಾವಿದರು,  ಪ್ರಸಂಗಕರ್ತರು ಹಾಗೂ ವಾಗ್ಮಿ, ಪ್ರಸ್ತುತ ಉಡುಪಿಯ ಕಲ್ಮಾಡಿಯ  ಅಸೆಮ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪವನ್ ಕಿರಣಕೆರೆ ಇವರು  ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸವನ್ನು ನೀಡಿದರು. ಶಿಕ್ಷಣ ಎಂಬುದು  ಮಾನವನಲ್ಲಿ ದೈವಿಕ ವಿಕಾಸವನ್ನು ತರುವಂತಿರಬೇಕು, ಭವ್ಯತೆಯಿಂದ  ದಿವ್ಯತೆಯೆಡೆಗೆ ಸಾಗುವ ಗುರಿಯನ್ನು ಮೂಡಿಸಬೇಕು. ದೇಶ ಎಂಬುದು  ಕೇವಲ ಕಲ್ಲು ಮಣ್ಣುಗಳಿಂದಾದ ಭೂಪ್ರದೇಶವಲ್ಲ, ಹೊರತಾಗಿ  ಸುದೃಢ ಮನಃಶಕ್ತಿ, ಆತ್ಮವಿಶ್ವಾಸ ತುಂಬಿರುವ ಯುವಶಕ್ತಿ ಎಂಬುದಾಗಿ
ವಿವೇಕಾನAದರ ವಿಚಾರಧಾರೆಗಳನ್ನು ಪ್ರಸಕ್ತ ಸಮಾಜಕ್ಕೆ  ಯೋಗ್ಯವಾದ ರೀತಿಯಲ್ಲಿ ಪ್ರಸ್ತುತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೂ, ಶ್ರೀರಾಮ  ವಿದ್ಯಾಕೇಂದ್ರದ ಸಂಸ್ಥಾಪಕರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ಮಾಡಿದರು. ಕಾಲೇಜು  ಪ್ರಾಂಶುಪಾಲರು, ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ  ಪ್ರಸಾದ್ ಕಾಯರಕಟ್ಟೆ, ಉಪ ಪ್ರಾಂಶುಪಾಲ, ಕಾರ್ಯಕ್ರಮ
ಸಂಯೋಜಕ ಯತಿರಾಜ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು ವಿವಿ. ಪ್ರಾಧ್ಯಾಪಕ, ವಿವೇಕಾನಂದ ಅಧ್ಯಯನ ಕೇಂದ್ರದ  ಸAಯೋಜಕ ಡಾ. ಚಂದ್ರು ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು  ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕಿ ಕು. ರಂಜಿತಾ ಕಾರ್ಯಕ್ರಮ ನಿರ್ವಹಿಸಿದರು., ಪ್ರಾಚಾರ್ಯ ಕೃಷ್ಣ ಪ್ರಸಾದ್ ಧನ್ಯವಾದ ಸಮರ್ಪಿಸಿದರು.  ವಿದ್ಯಾರ್ಥಿಗಳಾದ ಅಕ್ಷತ ಲಕ್ಷ್ಮೀ, ಸುಜನ್ಯಾ, ನಿಖಿಲ್ ಪ್ರೇರಣಾಗೀತೆ ಹಾಡಿದರು.