Sunday, October 11, 2026
ಸುದ್ದಿ

283 ಔಷಧಿಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ: ಯು.ಟಿ ಖಾದರ್ – ಕಹಳೆ ನ್ಯೂಸ್

ಬೆಂಗಳೂರು: 283 ಔಷಧಿಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್  ಹೇಳಿದ್ದಾರೆ.

ಜಾಹೀರಾತು

ಒಂದು ನಿರ್ಧಾರ ಮಾಡಿ ಕೇಂದ್ರ ಆರೋಗ್ಯ ಇಲಾಖೆಗೆ ಸೂಚಿಸಿದೆ. ಲಾಭಾಂಶ 30% ಒಳಗಡೆ ಇರಬೇಕು ಅಂತಾ ಸೂಚನೆ ನೀಡಿದೆ. ಇಲ್ಲಿಯ ತನಕ ಎಲ್ಲಾ ಔಷಧಿಗಳಲ್ಲಿ ಎಂಆರ್‌ಪಿ ಮಾತ್ರ ಇತ್ತು. ಇನ್ನುಮುಂದೆ ಉತ್ಪಾದನಾ ವೆಚ್ಚ ಎಷ್ಟು? ಮಾರಾಟ ವೆಚ್ಚ ಎಷ್ಟು? ಅಂತಾ ನಮೂದಿಸಬೇಕು ಅಂತಾ ತಿಳಿಸಿದೆ. ಆರೂವರೆ ಸಾವಿರ ಔಷಧಿ ಅರವತ್ತೈದು ಸಾವಿರ ಆಗುತ್ತಿತ್ತು. ಈ ದರ ಕಡಿಮೆ ಆಗುತ್ತೆ. ಸಾರ್ವಜನಿಕರ ಕಿಸೆಗೆ ಬೀಳುತ್ತಿದ್ದ ಹೊರೆ ಕಡಿಮೆ ಆಗುತ್ತಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರ ಮಟ್ಟದಲ್ಲಿ ಇದು ಸರಿಯಾದ ರೀತಿಯಲ್ಲಿ ಅನುಷ್ಠಾನ ಆದರೆ ಜನ ಸಾಮಾನ್ಯರ ಜೇಬಿನಿಂದ ಖರ್ಚಾಗುವ 2 ಸಾವಿರ ಕೋಟಿ ಹಣ ಉಳಿತಾಯವಾಗಲಿದೆ. ಕ್ಯಾನ್ಸರ್ ಜೊತೆಗೆ ಹೈರಿಸ್ಕ್ ಕಾಯಿಲೆಗಳ ಔಷಧಿ ಮೇಲೆ ದರ ನಿಗದಿಗೆ ಅವಕಾಶ ನೀಡಬೇಕು. ಮೆಡಿಕಲ್ ಸಾಮಾಗ್ರಿಗಳಿಗೂ ದುಪ್ಪಟ್ಟು ಹಣ ತೆಗೆದುಕೊಳ್ಳುತ್ತಾರೆ. ಹೀಗಾಗಿ ಲಾಭಾಂಶದಲ್ಲಿ ಲಿಮಿಟ್ ತಂದರೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಿಳಿಸಿದರು.