ಕಿಡ್ನ್ಯಾಪ್ ನಾಟಕವಾಡಿ 90 ಲಕ್ಷಕ್ಕೆ ಡಿಮ್ಯಾಂಡ್ : ತಂದೆಗೆ ಯಾಮಾರಿಸಲು ಯತ್ನಿಸಿದ ಮಗ ಅರೆಸ್ಟ್- ಕಹಳೆ ನ್ಯೂಸ್

ಬೆಂಗಳೂರು: ಕಿಡ್ನ್ಯಾಪ್ ನಾಟಕವಾಡಿ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ.
ಮನೀಷ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಹೇಳಿಸಿದ್ದ. ಅಲ್ಲದೇ 90 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ.
ಹಿಂದಿನ ದಿನ ಹಣದ ವ್ಯವಹಾರಕ್ಕೆಂದು ರೈಲಿನಲ್ಲಿ ಗದಗಕ್ಕೆ ಹೋಗುವುದಾಗಿ ಮನೀಷ್ ಹೇಳಿ ಹೋಗಿದ್ದ. ಬೆಳಗ್ಗೆ ಫೋನ್ ಮಾಡ್ತೀನಿ ಎಂದಿದ್ದ, ಬೆಳಗ್ಗೆ ಕರೆ ಬಂದಾಗ ಮಗನ ಕಿಡ್ನ್ಯಾಪ್ ಆಗಿದೆ ಎಂದಾಗ ಗಾಬರಿಗೊಂಡಿದ್ದ ಮನೋಹರ್, ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.










