Recent Posts

Wednesday, September 30, 2026
ಸುದ್ದಿ

ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಯಕ್ಷ ಕಲಾಕೇಂದ್ರ ಮತ್ತು ಬಲಿಪ ಪ್ರಸಾದ- ಸ್ಮರಣೆ ಮತ್ತು ಸಮ್ಮಾನ ಸಮಿತಿಯ ಸಹಯೋಗದಲ್ಲಿ ತೆಂಕುತಿಟ್ಟಿನ ಅಗ್ರ ಮಾನ್ಯ ಭಾಗವತ ಪ್ರಸಾದ ಬಲಿಪ ಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು :ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಯಕ್ಷ ಕಲಾಕೇಂದ್ರ (ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ) ಮತ್ತು ಬಲಿಪ ಪ್ರಸಾದ- ಸ್ಮರಣೆ ಮತ್ತು ಸಮ್ಮಾನ ಸಮಿತಿಯ ಸಹಯೋಗದಲ್ಲಿ ತೆಂಕುತಿಟ್ಟಿನ ಅಗ್ರ ಮಾನ್ಯ ಭಾಗವತ ಪ್ರಸಾದ ಬಲಿಪ ಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮವು ಗುರುವಾರ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಸಂಪನ್ನಗೊಂಡಿತು.
ವಿಶ್ವಮಾನ್ಯ ಕಲೆ ಯಕ್ಷಗಾನದ ಮೇರು ಭಾಗವತರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ, ಯಕ್ಷಗಾನದ ಪಾರಂಪರಿಕ ಭಾಗವತಿಕೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ ಭಾಗವತ ಪ್ರಸಾದ ಬಲಿಪರ ನೆನಪಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಮತ್ತು ಬಲಿಪ ಪ್ರಸಾದರ ಒಡನಾಡಿ ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆಯವರಿಗೆ ಬಲಿಪ ಪ್ರಸಾದ ಸ್ಮರಣೆ-
ಸಮ್ಮಾನವನ್ನು ಮಾಡಲಾಯಿತು.
ಬಲಿಪ ಪ್ರಸಾದರ ಸ್ಮರಣೆಯನ್ನು ಯಕ್ಷಗಾನ ಸಂಘಟಕ ಶ್ರೀ ಶಾಂತರಾಮ ಕುಡ್ವರವರು ನಿರ್ವಹಿಸಿದರು. ಪ್ರಸಾದ ಬಲಿಪ ಸ್ಮರಣೆ ಮತ್ತು ಸಮ್ಮಾನ ಕಾರ್ಯಕ್ರಮದ ಸಂಘಟಕರಾದ ಕೃಷ್ಣಕುಮಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ರೆ|ಡಾ|ಆಂಟೊನಿ ಪ್ರಕಾಶ್ ಮೊಂತೇರೋರವರ ಮಾರ್ಗದರ್ಶನದಲ್ಲಿ ಯಕ್ಷ ಕಲಾಕೇಂದ್ರದ ಕಾರ್ಯ ಚಟುವಟಿಕೆಗಳು ಪ್ರಶಂಸನೀಯ.
ಕಲೆ,‌ ಸಂಸ್ಕ್ರತಿಯ ಬೆಳವಣಿಗೆಗೆ ಸಂ ಸ್ಥೆಯು ನೀಡುವ ಪ್ರೋತ್ಸಾಹಕ್ಕಾಗಿ ಅಭಿನಂದಿಸಿದರು. ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಯಪ್ರಕಾಶ್ ಶೆಟ್ಟಿ ಪೆರ್ಮೂದೆಯವರು. ಪ್ರಸಾದ ಬಲಿಪರ, ಒಡನಾಟವನ್ನು ಸ್ಮರಿಸಿಕೊಂಡರು. ಸಮಿತಿಯ ಗೌರವ ಸಲಹೆಗಾರರಾದ ಶ್ರೀ ರುಕ್ಕಯ್ಯ ಪೂಜಾರಿಯವರು, ಕಲಾ ಕ್ಷೇತ್ರದ ಬೆಳವಣಿಗೆಗೆ ನೀಡಿದ ಕೊಡುಗೆಗೆ
ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯನ್ನು ಅಭಿನಂದಿಸಿದರು.  ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ರಿಚರ್ಡ್ ಕರ್ಡೋಜಾ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ ಮೊಳೆಯಾರರವರು ಬಲಿಪ ಶೈಲಿಯ ಬೆರಗು ಮತ್ತು ಯಕ್ಷಗಾನ ಕ್ಷೇತ್ರದ ಸಾಧಕರನ್ನು ಸಂತ ಫಿಲೋಮಿನಾ ಸಂಸ್ಥೆ ಸಮ್ಮಾನಿಸಿ ಕಲೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.  ಸಮಾರಂಭದಲ್ಲಿ ಬಲಿಪ ಪ್ರಸಾದ- ಸ್ಮರಣೆ ಸಮಿತಿಯವರು ಉಪಸ್ಥಿತಿರಿದ್ದರು. ಈ ಅಪೂರ್ವ ಕಾರ್ಯಕ್ರಮದಲ್ಲಿ ಗುರುದಕ್ಷಿಣೆ ಯಕ್ಷ ಸಂವಾದ ಕಾರ್ಯಕ್ರಮವು ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಮತ್ತು ಯಕ್ಷ ಕಲಾ ಕೇಂದ್ರದ ಹಾಗೂ ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಕ್ಷಕಲಾ ಕೇಂದ್ರ ನಿರ್ದೇಶಕ ಪ್ರಶಾಂತ ರೈ ಸ್ವಾಗತಿಸಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಭೌತಶಾಸ್ತ್ರ ವಿಭಾಗದ  ಪೂಜಾಶ್ರೀ ರೈಯವರು ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು