
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕುಂದಾಪುರ ತಾಲೂಕು ಹಾಗೂ ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆ (NIST) ಉಡುಪಿ. ಇದರ ಸಹಯೋಗದೊಂದಿಗೆ ಸೀರೆ ಕುಚ್ಚು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಬಟ್ಟೆ ವಿನಾಯಕ ದೇವಸ್ಥಾನ ದೇವಲ್ಕುಂದ ಸಭಾಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಹಮ್ಮಿಕೊಳ್ಳಲಾಯಿತು. ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಅಡಿಗರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮಾತೃಶ್ರೀ ಅಮ್ಮನವರು ಮಹಿಳೆಯರು ಸ್ವಾವಲಂಬಿ ಆಗಬೇಕು ಎಂಬ ಕಲ್ಪನೆಯಿಂದ ಜೊತೆಗೆ ದಿನದಲ್ಲಿ ಸ್ವಲ್ಪ ಆದಾಯ ಬೇಕು ಎಂಬ ದೃಷ್ಟಿಕೋನದಿಂದ ಗ್ರಾಮೀಣ ಭಾಗದಲ್ಲಿ ಸ್ವಉದ್ಯೋಗಕ್ಕೆ ಪ್ರೇರಣೆಯಾಗುವ ಸೀರೆ ಕುಚ್ಚು ತರಬೇತಿಯನ್ನು ಸ್ವ ಸಹಾಯ ಸಂಘದ ಸದಸ್ಯರಿಗೆ ಈ ಭಾಗದಲ್ಲಿ ನೀಡಲಾಗುತ್ತಿದೆ .ಎಲ್ಲಾ ಸದಸ್ಯರು ಇದರ ಪ್ರಯೋಜನವನ್ನು ಪಡೆದು ಉತ್ತಮ ಆದಾಯವನ್ನು ಗಳಿಸುವಂತಹ ಸಾಮರ್ಥ್ಯವನ್ನು ಎಲ್ಲರೂ ಹೊಂದಬೇಕು ಎಂದು ಕುಂದಾಪುರ ತಾಲೂಕಿನ ಯೋಜನಾಧಿಕಾರಿಯವರಾದ ಉಮೇಶ್ ಶೆಟ್ಟಿ ಹೆಚ್ ಹೇಳಿದರು. ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಉಡುಪಿ ಇದರ ಉಪನ್ಯಾಸಕರಾದ ನವೀನ್ ಶೆಟ್ಟಿ ಅವರು ಏಕಾಗ್ರತೆಯಿಂದ ಯಾವುದೇ ವಿದ್ಯೆಯನ್ನು ಕಲಿತರೆ ಅದು ಶಾಶ್ವತವಾಗಿ ನಮ್ಮಲ್ಲಿ ಇರುತ್ತದೆ. ಸ್ವಾವಲಂಬಿಯಾಗಿ ಬದುಕಲು ನಮ್ಮ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇಂತಹ ತರಬೇತಿ ಅತಿ ಅಗತ್ಯ ಎಂದು ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾದ ಶರತ್ ಶೆಟ್ಟಿರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಏನೆಂದರೆ ಗ್ರಾಮೀಣ ಪ್ರದೇಶದ ಜನರು ಸ್ವಾವಲಂಬಿ ಆಗಬೇಕು ಪ್ರತಿಯೊಬ್ಬರೂ ತಮ್ಮ ಸ್ವ ಸಾಮರ್ಥ್ಯದಿಂದ ಮೇಲ್ಮಟ್ಟಕ್ಕೆ ಬರಬೇಕು ಎಂಬುದು ಇದನ್ನು ಎಲ್ಲರೂ ಸರಿಯಾಗಿ ಅರಿತುಕೊಂಡು ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಎಂದು ಹೇಳಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಕೋಡಪದವು ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾ ಪ್ರತಿನಿಧಿ ಯಶೋಧರವರು ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜ್ಯೋತಿರವರು ವಂದನಾರ್ಪಣೆ ಮಾಡಿದರು. ಸೀರೆ ಕುಚ್ಚು ತಜ್ಞೆ ಚೈತ್ರ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











