ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ವಿವಾದ: ವಿಹಿಂಪ ಪ್ರಮುಖರ ಸಭೆ : ಆಗಸ್ಟ್ 3ಕ್ಕೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ – ಕಹಳೆ ನ್ಯೂಸ್

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣದ ಗೊಂದಲ ಬಗ್ಗೆ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ ವತಿಯಿಂದ ಪ್ರಮುಖರ ಸಭೆ ಹಾಗೂ ಸೋಮವಾರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತ ಮಂಡಳಿಗೆ ಹಲವು ಬೇಡಿಕೆಗಳನ್ನು ಆಗ್ರಹಿಸಿ ಮನವಿ ನೀಡಲು ನಿರ್ಧಾರ.
ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಯೋಜಿಸಿರುವ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಮತ್ತು ನಾಗ,ಅಯ್ಯಪ್ಪ ಮತ್ತು ನವಗ್ರಹ ಗುಡಿಗಳಿಗನ್ನು ಸ್ಥಳಾಂತರದ ನಂತರ ಹಾಗೂ ನಟರಾಜ ವೇದಿಕೆಯನ್ನು ತೆರವು ಮಾಡಿರುವ ವಿಷಯದ ಬಗ್ಗೆ ದೇವಸ್ಥಾನದ ಭಕ್ತಾಧಿಗಳಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ವತಿಯಿಂದ ಇಂದು ಪ್ರಮುಖರ ಸಭೆಯು ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯಿತು.
ಭಕ್ತರ ಭಾವನೆಗಳಿಗೆ ಅನುಗುಣವಾಗಿ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ಮಾಡಬೇಕು ಮತ್ತು ಈ ಗೊಂದಲಗಳಿಗೆ ಸಂಬಂಧಿಸಿದಂತೆ ನಾಳೆ ಸೋಮವಾರ ದಿನಾಂಕ 3ನೇ ಆಗಸ್ಟ್ ರಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ಬೇಡಿಕೆಗಳನ್ನು ಆಗ್ರಹಿಸಿ ಮನವಿ ನೀಡುವ ಬಗ್ಗೆ ಸಾಮೂಹಿಕವಾಗಿ ನಿರ್ಧರಿಸಲಾಯಿತು.











