ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ ಮಾಲಿಕೆ 71 : ಪ್ರಸ್ತುತ ಜೀವನದಲ್ಲೂ ನಾರಾಯಣಗುರು ಸಂದೇಶ ಪ್ರಸ್ತುತವಾಗಿದೆ: ಶಿಕ್ಷಕಿ ತ್ರಿವೇಣಿ ರಮೇಶ್- ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ನಾರಾಯಣಗುರುಗಳ ಸಂದೇಶಗಳು ಇಂದಿನ ಸಮಾಜ ಮತ್ತು ಜೀವನ ಮೌಲ್ಯಗಳಿಗೆ ಅತ್ಯಂತ ಪ್ರಸ್ತುತವಾಗಿವೆ. ಸಮಾನತೆ, ಮಾನವೀಯತೆ, ಶಿಕ್ಷಣ ಹಾಗೂ ಸೌಹಾರ್ದತೆಯ ಕುರಿತು ಗುರುದೇವರು ನೀಡಿದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ,” ಎಂದು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಹೇಳಿದರು.
ಅವರು ಜುಲೈ 16 ಗುರುವಾರ ನರಹರಿನಗರ, ಕಲ್ಲಡ್ಕದ ಶೇಖರ ಪೂಜಾರಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ ಮಾಲಿಕೆ–71ರ ಭಜನಾ ಸಂಕೀರ್ತನೆ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.
ಶ್ರೀ ನಾರಾಯಣಗುರುಗಳ ತತ್ವಾದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ; ಅವು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ. ಜಾತಿ, ಧರ್ಮ ಮತ್ತು ಭೇದಭಾವಗಳನ್ನು ಮೀರಿ ಪ್ರೀತಿ, ಸೇವೆ ಮತ್ತು ಸಹಬಾಳ್ವೆಯ ಜೀವನ ನಡೆಸುವಂತೆ ಗುರುಗಳು ಬೋಧಿಸಿರುವ ಸಂದೇಶಗಳು ಇಂದಿನ ಸಮಾಜಕ್ಕೂ ಸಮಾನವಾಗಿ ಅನ್ವಯಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೋಡಾಜೆ,
ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್ , ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ,
ನಿರ್ದೇಶಕರಾದ
ಶೈಲೇಶ್ ಪೂಜಾರಿ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಚಿನ್ನಾ ಕಲ್ಲಡ್ಕ , ಸಂಘಟನಾ ಕಾರ್ಯದರ್ಶಿ ಸುನಿತಾ ನಿತಿನ್ ಮಾರ್ನಬೈಲ್ , ಜಗನ್ನಾಥ್ ಕಲ್ಲಡ್ಕ,
ಮಾಜಿ ಅಧ್ಯಕ್ಷರಾದ
ಪ್ರೇಮನಾಥ್ ಕೆ, ಅರುಣ್ ಕುಮಾರ್ ನಾಗೇಶ್ ಪೊನ್ನೋಡಿ ಶಿವಾನಂದ ಎಂ.
ಸದಸ್ಯರಾದ ಯಶೋಧರ ಕಡಂಬಲಿಕೆ, ವಿಘ್ನೇಶ್ ಬೊಳ್ಳಾಯಿ , ಪ್ರಶಾಂತ್ ಎರಮಲೆ ಯತೀಶ್ ಬೊಳ್ಳಾಯಿ, ಜಗನ್ನಾಥ ಸುವರ್ಣ ಕಲ್ಲಡ್ಜ, ಮೋಹನ್ ಪೂಜಾರಿ ಇರಂತಬೆಟ್ಟು, ದಿಶಾನ್ ಉಪಸ್ಥಿತರಿದ್ದರು
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿರಣ್‌ರಾಜ್ ಪೂಂಜರೆಕೋಡಿ ಸ್ವಾಗತಿಸಿದರು
ನಾರಾಯಣ ಗುರು ತತ್ವ ಪ್ರಚಾರ ಅನುಷ್ಟಾನ ನಿರ್ದೇಶಕರು ಮಹೇಶ್ ಬೊಳ್ಳಾಯಿ ಧನ್ಯವಾದ ನೀಡಿದರು











