Thursday, July 2, 2026
ಸುದ್ದಿ

“ಪುತ್ತೂರ್ದ ಪಿಲಿಗೊಬ್ಬು” ಸೀಸನ್ 4 ಗೆ ಡೇಟ್ ಫಿಕ್ಸ್..!!-ಕಹಳೆ ನ್ಯೂಸ್

ಪುತ್ತೂರು: ಕಳೆದ ಮೂರು ವರ್ಷಗಳಿಂದ ವಿಜಯ ಸಾಮ್ರಾಟ್(ರಿ.) ಪುತ್ತೂರು ವತಿಯಿಂದ ಯುವನಾಯಕ ಸಹಜ್ ಜೆ ರೈ ಬಳಜ್ಜ ರವರ ಮುಂದಾಳತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ ‘ಪುತ್ತೂರ್ದ ಪಿಲಿಗೊಬ್ಬು’ ಕಾರ್ಯಕ್ರಮದ ಸೀಸನ್ ನಾಲ್ಕರ ದಿನಾಂಕ ನಿಗದಿಯಾಗಿದೆ.

ಜಾಹೀರಾತು

ಅಕ್ಟೋಬರ್ 17, ಶನಿವಾರ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜರುಗಲಿದ್ದು, ಹುಲಿವೇಷ ಕಲಾವಿದರ ಅದ್ಭುತ ಪ್ರದರ್ಶನ, ಸಾಂಪ್ರದಾಯಿಕ ನೃತ್ಯ ಹಾಗೂ ಸಾಂಸ್ಕೃತಿಕ ವೈಭವದ ಸಂಗಮಕ್ಕೆ ವೇದಿಕೆಯಾಗಲಿದೆ.ಈ ಕಾರ್ಯಕ್ರಮದ ಆಯೋಜಕರಾಗಿ ವಿಜಯ ಸಾಮ್ರಾಟ್(ರಿ.) ಪುತ್ತೂರು ಕಾರ್ಯನಿರ್ವಹಿಸುತ್ತಿದ್ದು, ಸರ್ವರಿಗೂ ಆತ್ಮೀಯ ಸ್ವಾಗತ ಕೋರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡಿನ ಸಾಂಸ್ಕೃತಿಕ ಹೆಮ್ಮೆಯಾದ ಹುಲಿವೇಷವನ್ನು ಸಂಭ್ರಮದಿಂದ ಆಚರಿಸುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಕಲಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹುಲಿವೇಷದ ರೋಚಕ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.