ಲಗೇಜ್ ಬ್ಯಾಗಲ್ಲಿ ಡ್ರಗ್ಸ್ ತರ್ತಿದ್ದ ನೈಜೀರಿಯಾ ಪ್ರಜೆಗಳು ಲಾಕ್ : 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ- ಕಹಳೆ ನ್ಯೂಸ್

ಬೆಂಗಳೂರು: ಒಂದು ಕಡೆ ಮಾದಕದ್ರವ್ಯ ಮುಕ್ತ ಕರ್ನಾಟಕವನ್ನ ರೂಪಿಸುವ ಗುರಿಯೊಂದಿಗೆ ಸರ್ಕಾರ ಮುಂದಡಿ ಇಟ್ಟಿದೆ. ಅದಕ್ಕಾಗಿ ನಿರಂತರ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಹೀಗಿದ್ದೂ ಭಾರೀ ಪ್ರಮಾಣದ ಡ್ರಗ್ಸ್ ಬೆಂಗಳೂರು ನಗರ ಪ್ರವೇಶಿಸಿರುವುದು ಆತಂಕ ಮೂಡಿಸಿದೆ. ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಡ್ರಗ್ಸ್ (Drugs) ತರುತ್ತಿದ್ದ ಮೂವರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ 10 ಕೆಜಿ 270 ಗ್ರಾಂ ನಷ್ಟು ಎಂಡಿಎಂಎ ಕ್ರಿಸ್ಟಲ್, 4 ಮೊಬೈಲ್ ಫೋನ್, 2 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.











