
ಬೆಂಗಳೂರು: ಮನೆಯಲ್ಲಿ ಪ್ರೀತಿ ವಿಚಾರ ತಿಳಿದಿದ್ದರೂ ಮದುವೆಗೆ ಒಪ್ಪದೇ ಅವಾಯ್ಡ್ ಮಾಡುತ್ತಿದ್ದ ಪ್ರೇಯಸಿಯನ್ನು, ಪ್ರಿಯಕರನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ. (ಜೂ.28) ರಾತ್ರಿ 9:30 ರ ಸುಮಾರಿಗೆ ಘಟನೆ ನಡೆದಿದೆ. ಅಂಜಲಿ (23) ಕೊಲೆಯಾದ ಯುವತಿ. ರಾಜೀವ್ ಪ್ರೇಯಸಿಯನ್ನ ಕೊಂದ ಪ್ರಿಯಕರ.
ಪ್ರೇಯಸಿಯನ್ನ ಊಟಕ್ಕೆ ಕರೆದಿದ್ದ ಪ್ರಿಯಕರ, ಮದುವೆ ವಿಚಾರ ಪ್ರಸ್ತಾಪಿಸಿ ಗಲಾಟೆ ಮಾಡಿದ್ದಾನೆ. ಈ ವೇಳೆ ಕೋಪಕೊಂಡು ಕತ್ತುಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.











