
ಪೆರ್ನೆ ವಲಯದ ಪೆರ್ನೆ ಎ ಕಾರ್ಯಕ್ಷೇತ್ರದ ಕಾರ್ಲ ನಿವಾಸಿ ರಮೇಶರವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಂಜೂರಾಗಿರುವ ರೂ.30000/- ಮೊತ್ತದ ಕ್ರಿಟಿಕಲ್ ಇಲ್ನೆಸ್ ಫಂಡ್ ನ್ನು ದಕ್ಷಿಣ ಕನ್ನಡ-2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ, ವಲಯ ಮೇಲ್ವಿಚಾರಕ ಲತೇಶ್, ಕಚೇರಿ ಸಹಾಯಕಿ ನಾಗರತ್ನ ಮತ್ತು ಸೇವಾಪ್ರತಿನಿಧಿ ತ್ರಿವೇಣಿ ಉಪಸ್ಥಿತರಿದ್ದರು











